ಅಮೆರಿಕ, ಚೀನಾಗಿಂತ ಭಾರತದ ಆರ್ಥಿಕ ಬೆಳವಣಿಗೆ ವೇಗವಾಗಿದೆ : ಹಾರ್ವರ್ಡ್

ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಆರ್ಥಿಕತೆಗಳಲ್ಲಿ ಭಾರತದ ಆರ್ಥಿಕತೆ ಮುಂಚೂಣಿಯಲ್ಲಿದ್ದು, ಚೀನಾ, ಅಮೆರಿಕಾಗಿಂತ ಮುಂದಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯ ತನ್ನ ವರದಿಯಲ್ಲಿ ಹೇಳಿದೆ.

ಭಾರತದ ಆರ್ಥಿಕತೆ ವಾರ್ಷಿಕವಾಗಿ ಶೇ.7.9 ರಷ್ಟು ಬೆಳೆಯುವ  ನಿರೀಕ್ಷೆ ಇದ್ದು, ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಅಭಿವೃದ್ಧಿ ಕೇಂದ್ರದ ವರದಿಯಲ್ಲಿ ವಿವಿಧ ರಾಷ್ಟ್ರಗಳ ಬೆಳವಣಿಗೆ ದರವನ್ನು ಅಂದಾಜಿಸಲಾಗಿದೆ.  ಈ ಪೈಕಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಆರ್ಥಿಕತೆಗಳಲ್ಲಿ ಭಾರತವೇ ಮುಂಚೂಣಿಯಲ್ಲಿದ್ದು,  ರಾಸಾಯನಿಕ, ವಾಹನ, ಕೆಲವು ಎಲೆಕ್ಟ್ರಾನಿಕ್ ವಸ್ತುಗಳೂ ಸೇರಿದಂತೆ ರಫ್ತು ಮೂಲವನ್ನು ವಿಭಿನ್ನಗೊಳಿಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ. 
ನಿರೀಕ್ಷೆಗೂ ಮೀರಿದ ಬೆಳವಣಿಗೆ ದರವನ್ನು ಸಾಧಿಸಲು ಭಾರತ ಸಾಮರ್ಥ್ಯಹೊಂದಿದ್ದು ಮುಂದಿನ ದಶಕಗಳಲ್ಲಿ ಭಾರತದ ಆರ್ಥಿಕತೆ ಮತ್ತಷ್ಟು ಕ್ಷಿಪ್ರಗತಿಯಲ್ಲಿ ಸಾಗಲಿದೆ ಎಂದು ಹಾರ್ವರ್ಡ್ ವಿವಿ ವರದಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com