ವಾಲ್ಮಾರ್ಟ್ ನ್ನು ಎದುರಿಸಲು ಭಾರತದಲ್ಲಿ ಅಮೇಜಾನ್ ನಿಂದ 2,600 ಕೋಟಿ ರೂ ಹೂಡಿಕೆ

ಅಮೆರಿಕದ ವಾಲ್ಮಾರ್ಟ್ ಸಂಸ್ಥೆ ಭಾರತದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ್ನು ಖರೀದಿಸುವುದಕ್ಕೆ ಮುಂದಾಗಿದ್ದು, ವಾಲ್ಮಾರ್ಟ್ ನ್ನು ಎದುರಿಸಲು ಅಮೇಜಾನ್ ಕಂಪನಿ ಭಾರತದಲ್ಲಿ ಹೆಚ್ಚುವರಿಯಾಗಿ 2,600
ಅಮೇಜಾನ್
ಅಮೇಜಾನ್
ಬೆಂಗಳೂರು: ಅಮೆರಿಕದ ವಾಲ್ಮಾರ್ಟ್ ಸಂಸ್ಥೆ ಭಾರತದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ನ್ನು ಖರೀದಿಸುವುದಕ್ಕೆ ಮುಂದಾಗಿದ್ದು, ವಾಲ್ಮಾರ್ಟ್ ನ್ನು ಎದುರಿಸಲು ಅಮೇಜಾನ್ ಕಂಪನಿ ಭಾರತದಲ್ಲಿ ಹೆಚ್ಚುವರಿಯಾಗಿ 2,600 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿದೆ. 
10 ರೂ ಮುಖಬೆಲೆಯ 260 ಕೋಟಿ ರೂ ಷೇರುಗಳನ್ನು ಹಂಚಲು ಅಮೇಜಾನ್ ನ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದ್ದು ಒಟ್ಟು 2,600 ಕೋಟಿ ರೂ ಹೂಡಿಕೆಯಾಗಲಿದೆ. ಇದಕ್ಕೂ ಮುನ್ನ ಅಮೇಜಾನ್ ನ ಸಿಇಒ ಭಾರತದಲ್ಲಿ ಒಟ್ಟು 5 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದರು. ಈಗ ವಾಲ್ಮಾರ್ಟ್ ನ್ನು ಎದುರಿಸಲು ಭಾರತದಲ್ಲಿ ಮತ್ತೆ  2,600 ಕೋಟಿ ರೂ ಹೂಡಿಕೆ ಮಾಡಲು ಅಮೇಜಾನ್ ಆಡಳಿತ ಮಂಡಳಿ ನಿರ್ಧರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com