ಮುಂಬೈ: ಭಾರತದ ವಿದೇಶಿ ವಿನಿಮಯ ಮೀಸಲು 417.70 ಬಿಲಿಯನ್ ಡಾಲರ್ ನಿಂದ 415.05 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ.
ಮೇ.11 ರಂದು ಅಂತ್ಯಗೊಂಡ ವಾರದ ಡಾಟಾ ಪ್ರಕಾರ ವಿದೇಶಿ ವಿನಿಮಯ ಮೀಸಲು 2.64 ಬಿಲಿಯನ್ ಡಾಲರ್ ನಷ್ಟು ಇಳಿದಿದೆ. ಆದರೆ ದೇಶದ ಗೋಲ್ಡ್ ರಿಸರ್ವ್ ಮಾತ್ರ 13 ಮಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು 21.70 ಬಿಲಿಯನ್ ನಷ್ಟಾಗಿದೆ.
ಇದೇ ವೇಳೆ ಎಸ್ ಡಿಆರ್ ಮೌಲ್ಯ ಹಾಗೂ ಐಎಂಎಫ್ ನಲ್ಲಿರುವ ದೇಶದ ರಿಸರ್ವ್ ಪೊಸಿಷನ್ ಕೂಡಾ 14.2 ಮಿಲಿಯನ್ ನಷ್ಟು ಕುಸಿದಿದೆ.