ಸುಲಭ ಸಾಲಕ್ಕಾಗಿ ಆರ್ ಬಿಐ ಮೇಲೆ ಸರ್ಕಾರದ ಒತ್ತಡ? ಗೌರ್ನರ್ ಪಟೇಲ್ ಮಣಿಯುತ್ತಾರಾ?

ಆರ್ ಬಿಐ-ಸರ್ಕಾರದ ನಡುವಿನ ತಿಕ್ಕಾಟ ತಾರಕಕ್ಕೇರುವ ಅಪಾಯ ಇದ್ದರೂ ಸುಲಭ ಸಾಲಕ್ಕಾಗಿ ಆರ್ ಬಿಐ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
Govt to press RBI at Nov 19 meet to ease lending
Govt to press RBI at Nov 19 meet to ease lending
ನವದೆಹಲಿ: ನ.19 ರಂದು ಆರ್ ಬಿಐ-ಕೇಂದ್ರ ಸರ್ಕಾರದ ಸಭೆ ನಡೆಯಲಿದ್ದು, ಸುಲಭ ಸಾಲಕ್ಕಾಗಿ ಒತ್ತಾಯಿಸುವ ಸಾಧ್ಯತೆ ಇದ್ದು, ಆರ್ ಬಿಐ-ಸರ್ಕಾರದ ನಡುವಿನ ತಿಕ್ಕಾಟ ತಾರಕಕ್ಕೇರುವ ಅಪಾಯ ಇದ್ದರೂ ಸುಲಭ ಸಾಲಕ್ಕಾಗಿ ಆರ್ ಬಿಐ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಒಂದೊಮ್ಮೆ ಸರ್ಕಾರದ ಒತ್ತಡ ಹೆಚ್ಚಿದರೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡುವ ಸಂಭವವಿದೆ. ಆದರೂ ಸಹ ಈ ರಿಸ್ಕ್ ನ್ನು ಲೆಕ್ಕಿಸದೇ ಆರ್ ಬಿಐ ಮೇಲೆ ಸರ್ಕಾರ ಒತ್ತಡ ಹೇರಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.  ಕಳೆದ ಒಂದು ವಾರದಿಂದ ಎನ್ ಪಿಎ ಗೆ ಸಂಬಂಧಿಸಿದಂತೆ ಆರ್ ಬಿಐ ಹಾಗೂ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಿದ್ದು, ಆರ್ ಬಿಐ ಗೆ ಸರ್ಕಾರ ನಿರ್ದೇಶನ ನೀಡುವುದಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ನ.19 ಕ್ಕೆ ಕೇಂದ್ರೀಯ ಬ್ಯಾಂಕ್ ನ ನಿರ್ದೇಶಕರು-ಸರ್ಕಾರದ ಸಭೆ ನಡೆಯಲಿದ್ದು ಕುತೂಹಲ ಮೂಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com