ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರುಪಾಯಿ: 600 ಅಂಕ ಇಳಿಕೆ ಕಂಡ ಸೆನ್ಸೆಕ್ಸ್, ಹೂಡಿಕೆದಾರರು ಕಂಗಾಲು

ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಈ ಇಳಿಕೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಕಂಗಾಲಾಗುವಂತೆ ಮಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಈ ಇಳಿಕೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಕಂಗಾಲಾಗುವಂತೆ ಮಾಡಿದೆ. 
ಷೇರು ಮಾರುಕಟ್ಟೆ 604 ಅಂಕಗಳ ಕುಸಿತದೊಂದಿಗೆ ಆರಂಭವಾಗಿದ್ದು, ಈ ಮೂಲಕ ಹೂಡಿಕೆದಾರರನ್ನು ಮತ್ತೆ ನಷ್ಟಕ್ಕೆ ತಳ್ಳಿದೆ. ನಿನ್ನೆಯಷ್ಟೇ ಸುಮಾರು ರೂ.1.70 ಲಕ್ಷ ಕೋಟಿ ನಷ್ಟ ಉಂಟು ಮಾಡಿತ್ತು. ಇದೀಗ ಈ ನಷ್ಟ ಇಂದೂ ಕೂಡ ಮುಂದುವರೆಯುವ ಎಲ್ಲಾ ಸಾಧ್ಯತೆಗಳು ಆರಂಭದಲ್ಲಿಯೇ ಕಾಣಿಸತೊಡಗಿದೆ. 
ದಿನದ ವಹಿವಾಟು ಆರಂಭವಾದಾಗ 73.34 ಆಗಿದ್ದ ರುಪಾಯಿ ಮೌಲ್ಯ ಕೆಲವೇ ಹೊತ್ತಿನಲ್ಲಿ 73.77ಕ್ಕೆ ತಲುಪಿದೆ. ತೈಲ ಆಮದು ಕಂಪನಿಗಳಿಂದ ಡಾಲರ್'ಗೆ ಬೇಡಿಕೆ ಹೆಚ್ಚಿದ್ದು, ಕಚ್ಚಾ ತೈಲದ ಬೆಲೆ ಏರಿಕೆ ಕಂಡು ಬಂದ ಕಾರಣ ರುಪಾಯಿ ಮೌಲ್ಯ ಕುಸಿತ ಕಂಡಿದೆ. 
ರುಪಾಯಿ ವಿನಿಮಯ ದರ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಗಲ್ಫ್ ಕರೆನ್ಸಿ ಮೇಲೂ ಇದರ ಪ್ರಭಾವ ಬೀರಿದೆ. ಕಚ್ಚಾ ತೈಲ ಬೆಲೆ ಬ್ಯಾರೆಲ್'ಗೆ 85 ಡಾಲರ್ ದಾಟಿದ್ದು ರುಪಾಯಿ ಮೌಲ್ಯಕ್ಕೆ ಹೊಡೆತವನ್ನುಂಟು ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com