ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಟಿಸಿಎಸ್, ಇನ್ಫೋಸಿಸ್ ಸೇರಿದಂತೆ 10 ಕಂಪನಿಗಳಿಗೆ 1 ಲಕ್ಷ ಕೋಟಿ ನಷ್ಟ!

ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಭಾರತದ ಪ್ರಮುಖ 10 ಕಂಪನಿಗಳು ಬರೋಬ್ಬರಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಭಾರತದ ಪ್ರಮುಖ 10 ಕಂಪನಿಗಳು ಬರೋಬ್ಬರಿ 1 ಲಕ್ಷ ಕೋಟಿ ರುಪಾಯಿ ನಷ್ಟ ಅನುಭವಿಸಿವೆ. 
ಕಳೆದ ಶುಕ್ರವಾರ ಅಂತಿಮಗೊಂಡ ಷೇರು ಮಾರುಕಟ್ಟೆಯಲ್ಲಿ ಭಾರತ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದ್ದು ಇದರಲ್ಲಿ ಟಾಟಾ ಕನ್ಸ್‌ಲಟೆನ್ಸಿ ಸರ್ವಿಸ್(ಟಿಸಿಎಸ್), ಇನ್ಫೋಸಿಸ್, ಐಟಿಸಿ ಪ್ರಮುಖವಾಗಿದೆ. ಇನ್ನುಳಿದಂತೆ ರಿಲಿಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ಸಿ ಬ್ಯಾಂಕ್,ಹಿಂದೂಸ್ತಾನ್ ಯೂನಿಲಿವರ್ ಲಿ., ಎಚ್ಡಿಎಫ್ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟೆಕ್ ಮಹೇಂದ್ರ ಬ್ಯಾಂಕ್ ಮತ್ತು ಸುಜೂಕಿ ಭಾರತ ನಷ್ಟ ಅನುಭವಿಸಿರುವ ಇತರ ಸಂಸ್ಥೆಗಳು. 
ಟಿಸಿಎಸ್ ಮೌಲ್ಯ 85,330,17 ಕೋಟಿ ರು. ಇದ್ದದ್ದು ಕಳೆದ ಶುಕ್ರವಾರದ ಷೇರು ಮಾರುಕಟ್ಟೆ ಅಂತ್ಯಕ್ಕೆ 7,19,857 ಕೋಟಿ ರುಪಾಯಿಗೆ ಇಳಿದಿದೆ. ಇನ್ನು ಇನ್ಫೋಸಿಸ್ ಮೌಲ್ಯ 18,696.68 ಕೋಟಿಯಿಂದ 2,96,635.05 ಕೋಟಿಗೆ ಇಳಿದಿದ್ದು ಐಟಿಸಿ ಕಂಪನಿ ಮೌಲ್ಯ 2,999.27 ಕೋಟಿಯಿಂದ 3,36,284.40 ಕೋಟಿ ರುಪಾಯಿಗೆ ಇಳಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com