ಈ ವರ್ಷ ಭಾರತೀಯರು ಚೀನಾ ಮೊಬೈಲ್ ಗೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?

ಭಾರತ ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆ ಹೊಂದಿದ್ದು, ಚೀನಾ ಉತ್ತಮ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಭಾರತ ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆ ಹೊಂದಿದ್ದು, ಚೀನಾ ಉತ್ತಮ ಕ್ಯಾಮೆರಾಗಳೊಂದಿಗೆ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬ್ರಾಂಡ್ ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿದೆ.
ಎಕೊನೋಮಿಕ್ ಟೈಮ್ಸ್ ವರದಿಯ ಪ್ರಕಾರ, 2018ನೇ ಆರ್ಥಿಕ ವರ್ಷದಲ್ಲಿ ಭಾರತೀಯರು ಚೀನಾ ಕಂಪನಿಯ ಸ್ಮಾರ್ಟ್ ಫೋನ್ ಗಳಿಗಾಗಿ ಬರೋಬ್ಬರಿ 50 ಸಾವಿರ ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ.
ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯೇ ಭಾರತೀಯರು ಚೀನಾ ಮೊಬೈಲ್ ಗೆ ಆಕರ್ಷಿತರಾಗಲು ಕಾರಣವಾಗಿದೆ.
ವಿಶ್ಲೇಷಕರು ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಇದೇ ಪ್ರವೃತ್ತಿ ಮುಂದುವರೆಯಲಿದೆ. ಭಾರತದಲ್ಲಿ ಮಾರಾಟವಾಗುವ ಅರ್ಧಕ್ಕಿಂತಲೂ ಹೆಚ್ಚು ಸ್ಮಾರ್ಟ್ ಫೋನ್ ಗಳು ಕ್ಸಿಯಾಮಿ, ಒಪ್ಪೊ, ವಿವೋ, ಹೊನೊರ್, ಲೆನೊವೊ ಮೊಟೊರೊಲಾ ಮತ್ತು ಒನ್ ಪ್ಲಸ್ ಗಳಂತಹ ಚೀನಿ ನಿರ್ಮಿತ ಮೊಬೈಲ್ ಗಳಾಗಿವೆ.
ದೇಶದ ಹೆಚ್ಚು ಉದ್ಯೋಗ ಸೃಷ್ಟಿಸುವ ಮೇಕ್ ಇನ್ ಇಂಡಿಯಾ ಅಭಿಯಾನದಡಿ ವಿವೋ ಮತ್ತು ಒಪ್ಪೊ ಕಂಪನಿಗಳು ಆರಂಭವಾಗಿದ್ದು, ನೋಯಿಡಾದಲ್ಲಿರುವ ವಿವೋ ನಿರ್ಮಾಣ ಘಟಕದಲ್ಲಿ ಸುಮಾರು 5 ಸಾವಿರ ಮಂದಿ ಕೆಲಸ ಮಾಡುತ್ತಿದ್ದಾರೆ.
2017ರ ಆರ್ಥಿಕ ವರ್ಷದಲ್ಲಿ ಚೀನಿ ಮೊಬೈಲ್ ಗಳ ಮೇಲೆ ಭಾರತೀಯರು 26,262.4 ಕೋಟಿ ರುಪಾಯಿ ವೆಚ್ಚ ಮಾಡಿದ್ದರು. ಈ ವರ್ಷ ಅದು ಡಬಲ್ ಆಗಿದ್ದು, 51,722.1 ಕೋಟಿ ರುಪಾಯಿಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಚೀನಾ ಸ್ಮಾರ್ಟ್ ಪೋನ್ ಕಂಪನಿಗಳ ಆರ್ಭಟದಿಂದಾಗಿ ಭಾರತೀಯ ಸ್ಮಾರ್ಟ್ ಫೋನ್ ಕಂಪನಿಗಳು ನಷ್ಟದ ಹಾದಿಯನ್ನು ತುಳಿಯುತ್ತಿವೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com