ಫೇಸ್ ಬುಕ್ ಸಂಸ್ಥೆ ತೊರೆದ ಇನ್ಸ್ಟಾಗ್ರಾಮ್ ಸಹ ಸಂಸ್ಥಾಪಕರಾದ ಕೆವಿನ್ ಸಿಸ್ಟ್ರೋಮ್, ಮೈಕ್ ಕ್ರೆಗರ್

ಫೇಸ್ ಬುಕ್ ಇಂಕ್ ಒಡೆತನದ ಫೋಟೋ ಶೇರಿಂಗ್ ಆಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ...
ಇನ್ಸ್ಟಾಗ್ರಾಮ್ ನ ಸಹ ಸಂಸ್ಥಾಪಕರಾದ ಮೈಕ್ ಕ್ರೆಗರ್ ಮತ್ತು ಕೆವಿನ್ ಸಿಸ್ಟ್ರೋಮ್
ಇನ್ಸ್ಟಾಗ್ರಾಮ್ ನ ಸಹ ಸಂಸ್ಥಾಪಕರಾದ ಮೈಕ್ ಕ್ರೆಗರ್ ಮತ್ತು ಕೆವಿನ್ ಸಿಸ್ಟ್ರೋಮ್

ಫೇಸ್ ಬುಕ್ ಇಂಕ್ ಒಡೆತನದ ಫೋಟೋ ಶೇರಿಂಗ್ ಆಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಹುದ್ದೆಯಿಂದ ಇನ್ಸ್ಟಾಗ್ರಾಮ್ ನ ಸಹ ಸಂಸ್ಥಾಪಕರಾದ ಕೆವಿನ್ ಸಿಸ್ಟ್ರೋಮ್ ಮತ್ತು ಮೈಕ್ ಕ್ರೆಗರ್ ನಿರ್ಗಮಿಸಿದ್ದಾರೆ.

ಈ ವಿಷಯವನ್ನು ನಿನ್ನೆ ಇನ್ಟ್ರಾಗ್ರಾಮ್ ಪ್ರಕಟಿಸಿದೆ. ಫೇಸ್ ಬುಕ್ ಮಾಲಿಕತ್ವದ ಮೆಸೇಜ್ ಆಪ್ ವಾಟ್ಸಾಪ್ ನ ಸಹ ಸಂಸ್ಥಾಪಕರಾದ ಜಾನ್ ಕೌಮ್ ಅವರ ನಿರ್ಗಮನದ ಕೆಲವೇ ತಿಂಗಳುಗಳು ಕಳೆದ ನಂತರ ಇವರು ಸಹ ನಿರ್ಗಮಿಸಿರುವುದು ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಸೋಷಿಯಲ್ ನೆಟ್ವರ್ಕ್ ಸಂಸ್ಥೆಗಳಿಗೆ ಹಿನ್ನಡೆಯಾಗಿದೆ ಎನ್ನಬಹುದು.

ಗ್ರಾಹಕರ ದಾಖಲೆಗಳು, ಅಂಕಿಅಂಶಗಳನ್ನು ಹೇಗೆ ಕಾಪಾಡುತ್ತದೆ ಎಂದು ಫೇಸ್ ಬುಕ್ ವಿರುದ್ಧ ಸಂದೇಹ ಉಂಟಾಗಿ ಟೀಕೆಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಫೇಸ್ ಬುಕ್ ನ ಪ್ರಮುಖ ವೇದಿಕೆಯಿಂದ ಈ ಇಬ್ಬರು ಗಣ್ಯರು ಹೊರನಡೆದಿದ್ದು ಕಂಪೆನಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇನ್ನೊಂದೆಡೆ ಫೇಸ್ ಬುಕ್ ನಲ್ಲಿ ವ್ಯಾಪಕವಾಗಿ ಹರಡುತ್ತಿರುವ ತಪ್ಪು ಮತ್ತು ಸುಳ್ಳು ಮಾಹಿತಿಗಳನ್ನು ತಡೆಹಿಡಿಯಲು ಕೂಡ ಫೇಸ್ ಬುಕ್ ಪ್ರಯತ್ನಿಸುತ್ತಿದೆ.

ನಮ್ಮ ಕುತೂಹಲ ಮತ್ತು ಕ್ರಿಯಾಶೀಲತೆಯನ್ನು ಮತ್ತೆ ಒರೆಗೆ ಹಚ್ಚಲು  ಮತ್ತು ಹೊಸದನ್ನು ಕಂಡುಹಿಡಿಯಲು ಯೋಜನೆ ರೂಪಿಸಲು ಸಮಯ ಬೇಕಾಗಿದ್ದು ಅದಕ್ಕಾಗಿ ತಾವು ರಾಜೀನಾಮೆ ನೀಡಿರುವುದಾಗಿ ಸಿಸ್ಟ್ರೊಮ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ಸ್ಟಾಗ್ರಾಮ್, ಬ್ಲೂಮ್ ಬರ್ಗ್ ನಿಂದ ಬರುತ್ತಿರುವ ನಿರ್ದೇಶನಗಳ ಬಗ್ಗೆ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಝುಗರ್ ಬರ್ಗ್  ಜೊತೆ ಪದೇ ಪದೇ ಘರ್ಷಣೆಯುಂಟಾಗುತ್ತಿರುವುದರ ಮಧ್ಯೆ ಈ ಇಬ್ಬರು ಖ್ಯಾತ ತಂತ್ರಜ್ಞರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಈ ಹಿಂದೆ ಹೇಳಿಕೆಯೊಂದರಲ್ಲಿ ಮಾರ್ಕ್ ಝುಗರ್ ಬರ್ಗ್ ಈ ಇಬ್ಬರನ್ನು ಅದ್ವಿತೀಯ ನಾಯಕರು ಎಂದು ಬಣ್ಣಿಸಿದ್ದರು,

ಕಳೆದ 6 ವರ್ಷಗಳಲ್ಲಿ ಅವರಿಂದ ಸಾಕಷ್ಟು ಕಲಿತುಕೊಂಡಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿ ಕೊಟ್ಟಿದೆ. ಅವರಿಗೆ ಈ ಸಂದರ್ಭದಲ್ಲಿ ಶುಭ ಕೋರುತ್ತಿದ್ದು ಅವರ ಮುಂದಿನ ಯೋಜನೆಗಳ ಬಗ್ಗೆ ನಾನು ಕಾತರನಾಗಿದ್ದೇನೆ ಎಂದು ಹೇಳಿದ್ದಾರೆ.

ಸಿಸ್ಟ್ರಮ್ ಮತ್ತು ಕ್ರೆಗರ್ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭೇಟಿಯಾಗಿದ್ದರು. 2010ರಲ್ಲಿ ಇನ್ಸ್ಟಾಗ್ರಾಮ್ ಸ್ಥಾಪಿಸುವ ಮುನ್ನ ಬೇರೆಯಾಗಿಯೇ ಕೆಲಸ ಮಾಡುತ್ತಿದ್ದರು. ಫೇಸ್ ಬುಕ್ 2012ರಲ್ಲಿ ಇನ್ಸ್ಟಾಗ್ರಾಮ್ ನ್ನು 1 ಶತಕೋಟಿ ಡಾಲರ್ ಗೆ ಖರೀದಿಸಿತ್ತು. ಫೋಟೋ ಶೇರಿಂಗ್ ಆಪ್ ತಿಂಗಳಲ್ಲಿ 1 ಶತಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಈ ವರ್ಷ ಆಪ್ ಮೂಲಕ 8 ಶತಕೋಟಿ ಡಾಲರ್ ಗೂ ಅಧಿಕ ಆದಾಯವನ್ನು ಸಂಸ್ಥೆ ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com