ಇನ್ಫೋಸಿಸ್ ವಿರುದ್ದ ವಿರುದ್ದ ಮುಗಿಬಿದ್ದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ

ಇನ್ಫೋಸಿಸ್ ವಿರುದ್ಧ ದಾವೆ ಹೂಡುವುದಾಗಿ ಲಾಸ್ ಏಂಜಲೀಸ್ ಮೂಲದ ಷೇರುದಾರರ ಹಕ್ಕುಗಳ ಸಂಸ್ಥೆ(ಶಾಲ್ ಲಾ ಫರ್ಮ್) ಘೋಷಿಸಿದೆ.  
ಇನ್ಫೋಸಿಸ್ ವಿರುದ್ದ ವಿರುದ್ದ ಮುಗಿಬಿದ್ದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ
ಇನ್ಫೋಸಿಸ್ ವಿರುದ್ದ ವಿರುದ್ದ ಮುಗಿಬಿದ್ದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ

ಲಾಸ್ ಏಂಜಲೀಸ್: ಇನ್ಫೋಸಿಸ್ ವಿರುದ್ಧ ದಾವೆ ಹೂಡುವುದಾಗಿ ಲಾಸ್ ಏಂಜಲೀಸ್ ಮೂಲದ ಷೇರುದಾರರ ಹಕ್ಕುಗಳ ಸಂಸ್ಥೆ(ಶಾಲ್ ಲಾ ಫರ್ಮ್) ಘೋಷಿಸಿದೆ. ಅಲ್ಪಾವಧಿಯ ಲಾಭವನ್ನು ಪಡೆಯಲು ಇನ್ಫೋಸಿಸ್ ಸುಳ್ಳು ಜಾಹಿರಾತು ನೀಡಿದೆ ಎಂದು ತನ್ನ ದೂರಿನಲ್ಲಿ ತಿಳಿಸಿದೆ.
 
ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಅವರು ಲೆಕ್ಕ ಪತ್ರಗಳ ಸಮೀಕ್ಷೆಯನ್ನು ಮರೆಮಾಚಿದ್ದಾರೆ ಎಂದು ತಿಳಿಸಿದೆ. ಲೆಕ್ಕ ಪತ್ರ ವಿವರಗಳನ್ನು ಮ್ಯಾನೇಜ್ ಮೆಂಟ್ ಒತ್ತಡದಿಂದ ಹಣಕಾಸು ವಿಭಾಗಕ್ಕೆ ಒದಗಿಸದೆ ಮರೆಮಾಚಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಇನ್ಫೋಸಿಸ್ ಸಂಬಂಧಿಸಿದ ದೂರುಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿಇನ್ಫೋಸಿಸ್ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಿದೆ.

ಜುಲೈ 7, 2018 ರಿಂದ ಅಕ್ಟೋಬರ್ 20, 2019 ರವರೆಗೆ ಸೆಕ್ಯೂರಿಟಿಗಳನ್ನು ಖರೀದಿಸಿದ ಹೂಡಿಕೆದಾರರು ಶಾಲ್ ಲಾ ಫರ್ಮ್ ಅನ್ನು ಸಂಪರ್ಕಿಸಬಹುದು ಎಂದು ಕೋರಿದೆ.  ಶಾ ಲಾ ಫರ್ಮ್ ವಿಶ್ವದಾದ್ಯಂತ ಷೇರುದಾರರು ಮತ್ತು ಷೇರುದಾರರ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ವಿರುದ್ದ ವಿಶಲ್ ಬ್ಲೋಯರ್ ದೂರುಗಳನ್ನು ನೀಡಿದ್ದಾರೆ. ಆದರೆ ಈ ಆರೋಪಗಳನ್ನು  ಕಂಪನಿ ತಳ್ಳಿಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com