ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂ. ತುರ್ತು ನೆರವು ಕೇಳಿದ ಜೆಟ್ ಏರ್ವೇಸ್

ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ತೀವ್ರವಾಗಿ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆ ತನ್ನ ಈಕ್ವಿಟಿ ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂಪಾಯಿ ತುರ್ತು ನೆರವು ಕೇಳಿದೆ.
ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂ. ತುರ್ತು ನೆರವು ಕೇಳಿದ ಜೆಟ್ ಏರ್ವೇಸ್
ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂ. ತುರ್ತು ನೆರವು ಕೇಳಿದ ಜೆಟ್ ಏರ್ವೇಸ್
ನವದೆಹಲಿ: ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ತೀವ್ರವಾಗಿ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆ ತನ್ನ ಈಕ್ವಿಟಿ ಪಾಲುದಾರ ಸಂಸ್ಥೆ ಇತಿಹಾದ್ ನಿಂದ 750 ಕೋಟಿ ರೂಪಾಯಿ ತುರ್ತು ನೆರವು ಕೇಳಿದೆ. 
ಸುಮಾರು 50 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿರುವುದರಿಂದ ಈಗ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೀಡಾಗಿರುವ ಜೆಟ್ ಏರ್ವೇಸ್ ನ ಅಧ್ಯಕ್ಷ ನರೇಶ್ ಗೋಯಲ್ ಗಲ್ಫ್ ಮೂಲದ ಇತಿಹಾದ್ ನ ಮುಖ್ಯ ಕಾರ್ಯನಿರ್ವಾಹಕ ಟೋನಿ ಡೌಗ್ಲಾಸ್ ಗೆ ಪತ್ರ ಬರೆದಿದ್ದಾರೆ. 
ಮಧ್ಯಂತರ ಫಂಡಿಂಗ್ ಗಾಗಿ ಜೆಟ್ ಪ್ರಿವಿಲೇಜ್ ನಲ್ಲಿ ತನ್ನ ಷೇರುಗಳನ್ನು ಅಡ ಇಡುವುದಕ್ಕೆ ಜೆಟ್ ಏರ್ವೇಸ್ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆದಿರುವುದಾಗಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com