ಸಾಂದರ್ಭಿಕ ಚಿತ್ರ
ವಾಣಿಜ್ಯ
ವಾಟ್ಸ್ ಆಪ್ ಹಗರಣದ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿದ ಎಸ್ ಬಿಐ
ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಅನುಮಾನಾಸ್ಪದ ವಾಟ್ಸ್ ಆಪ್....
ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಅನುಮಾನಾಸ್ಪದ ವಾಟ್ಸ್ ಆಪ್ ಸಂದೇಶಗಳ ಬಗ್ಗೆ ತನ್ನ ಗ್ರಾಹಕರಿಗೆ ಬುಧವಾರ ಎಚ್ಚರಿಕೆ ನೀಡಿದೆ.
ವಾಟ್ಸ್ ಆಪ್ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯಾಂಕ್ ಖಾತೆಯ ಸೂಕ್ಷವಾದ ವಿಚಾರಗಳನ್ನು ಹಂಚಿಕೊಳ್ಳುವುದರಿಂದ ಮೋಸಹೋಗಬಹುದು ಎಂದು ಎಸ್ ಬಿಐ ಎಚ್ಚರಿಕೆ ನೀಡಿದೆ.
ಬ್ಯಾಂಕ್ ಖಾತೆಯ ವಿವರ ಕೋರಿ ತನ್ನ ಕೆಲವು ಗ್ರಾಹಕರಿಗೆ ನಕಲಿ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ಎಸ್ ಬಿಐ ಟ್ವೀಟ್ ಮಾಡಿದ್ದು, ಎಚ್ಚರಿಕೆಯಿಂದರುವಂತೆ ಮತ್ತು ಸುರಕ್ಷಿತವಾಗಿರುವಂತೆ ಮನವಿ ಮಾಡಿದೆ. ಅಲ್ಲದೆ ಯಾವುದೇ ಅಹಿತಕರ ಘಟನೆ ನಡೆದರೆ 1-800-111109 ಕರೆ ಮಾಡುವಂತೆ ತಿಳಿಸಿದೆ.
ವಂಚಕರು, ಬ್ಯಾಂಕ್ ಗ್ರಾಹಕರಿಗೆ ಕರೆ ಮಾಡಿ, ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಅವಧಿ ಮುಗಿದಿದೆ ಬದಲಾಯಿಸಿಕೊಳ್ಳಿ ಎಂದು ಹೇಳಿ, ಕಾರ್ಡ್ ನಂಬರ್, ಸಿವಿವಿ ಹಾಗೂ ಮುಕ್ತಾಯ ದಿನಾಂಕ ಸೇರಿದಂತೆ ಇತರೆ ಮಾಹಿತಿಗಳನ್ನು ಪಡೆದು ವಂಚಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ