ಕೊಡುಗೈ ದಾನಿಗಳಲ್ಲಿ ಎಚ್ ಸಿಎಲ್ ನಾಡರ್ ಪ್ರಥಮ,ಮುಖೇಶ್ ಮೂರನೇ ಸ್ಥಾನ!

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿಯಾಗಿದ್ದರೂ, ಕೊಡುಗೈ ದಾನಿಗಳಲ್ಲಿ  ಮೂರನೇ ಸ್ಥಾನದಲ್ಲಿದ್ದಾರೆ. ಹೆಚ್ ಸಿಎಲ್ ತಂತ್ರಜ್ಞಾನ ಸಂಸ್ಥೆಯ ಶಿವ್ ನಾಡರ್ ಅಗ್ರಸ್ಥಾನದಲ್ಲಿದ್ದಾರೆ.  
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ

ಮುಂಬೈ:ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿಯಾಗಿದ್ದರೂ, ಕೊಡುಗೈ ದಾನಿಗಳಲ್ಲಿ  ಮೂರನೇ ಸ್ಥಾನದಲ್ಲಿದ್ದಾರೆ. ಹೆಚ್ ಸಿಎಲ್ ತಂತ್ರಜ್ಞಾನ ಸಂಸ್ಥೆಯ ಶಿವ್ ನಾಡರ್ ಅಗ್ರಸ್ಥಾನದಲ್ಲಿದ್ದಾರೆ.  

ಅಜಿಂ ಪ್ರೇಮ್ ಜೀ 21 ಬಿಲಿಯನ್ ಅಮೆರಿಕನ್ ಡಾಲರ್  ಹಣವನ್ನು  ಸಾಮಾಜಿಕ  ಕಾರ್ಯಗಳಿಗೆ ದಾನವಾಗಿ ನೀಡುವ ಮೂಲಕ  2019ರ ಕೊಡುಗೈ ದಾನಿಗಳಲ್ಲಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಕಂಪೆನಿಗಳ ಕಾಯ್ದೆ 2013 ಪ್ರಕಾರ ಕಾರ್ಪೋರೇಟ್ ಕಂಪನಿಗಳು ಒಂದು  ನಿರ್ದಿಷ್ಟ ಮಿತಿಗಿಂತ ತಮ್ಮ ಲಾಭದ 2 ಪ್ರತಿಶತವನ್ನು ಸಿಎಸ್‌ಆರ್‌ಗೆ ವಿನಿಯೋಗಿಸುವುದು ಕಡ್ಡಾಯಗೊಳಿಸಲಾಗಿದೆ. 

ನಾಡರ್ ಕುಟುಂಬ 826 ಕೋಟಿಯನ್ನು ದಾನವಾಗಿ ನೀಡಿದ್ದರೆ ಅಜೀಂ ಪ್ರೇಮ್ ಜೀ 453 ಕೋಟಿ ಹಾಗೂ ಅಂಬಾನಿ 402 ಕೋಟಿ ರೂಪಾಯಿಯನ್ನು ಸಾಮಾಜಿಕ ಕಾರ್ಯಗಳಿಗಾಗಿ ದಾನವಾಗಿ ನೀಡಿದ್ದಾರೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com