ಭಾರತದ ಆರ್ಥಿಕ ಪ್ರಗತಿ ನಿರೀಕ್ಷೆಗಿಂತ ಕುಂಠಿತ: ಐಎಂಎಫ್

ಸಾಂಸ್ಥಿಕ ಮತ್ತು ಪರಿಸರ ನಿಯಂತ್ರಕ ಅನಿಶ್ಚಿತತೆ  ಹಾಗೂ ಕೆಲವು ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿನ  ಧೀರ್ಘಕಾಲದ ದೌರ್ಬಲ್ಯ'ದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ  ಕುಸಿತವಾಗಿದೆ  ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸಾಂಸ್ಥಿಕ ಮತ್ತು ಪರಿಸರ ನಿಯಂತ್ರಕ ಅನಿಶ್ಚಿತತೆ  ಹಾಗೂ ಕೆಲವು ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿನ   ಧೀರ್ಘಕಾಲದ ದೌರ್ಬಲ್ಯ'ದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ  ಕುಸಿತವಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.

ಕಾರ್ಪೊರೇಟ್ , ಪರಿಸರ ನಿಯಂತ್ರಕ ಅನಿಶ್ಚಿತತೆ ಹಾಗೂ ಕೆಲವು ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿನ ಧೀರ್ಘಕಾಲದ ದೌರ್ಬಲ್ಯಗಳ ಕಾರಣಗಳಿಂದ  ಭಾರತದಲ್ಲಿನ ಇತ್ತೀಚಿನ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತಲೂ ದುರ್ಬಲವಾಗಿದೆ. ಆರ್ಥಿಕ ಕುಂಠಿತದ ತೊಂದರೆ ಕಾಣಿಸಿಕೊಳ್ಳುತ್ತಿವೆ ಎಂದು ಐಎಂಎಫ್ ವಕ್ತಾರ ಗೆರ್ರಿ ರೈಸ್ ಸುದ್ದಿಗಾರರಿಗೆ ಹೇಳಿದರು.

ಸರ್ಕಾರದ ಪ್ರಕಾರದ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕ ಅವಧಿಯಲ್ಲಿ  ಆರ್ಥಿಕ ಪ್ರಗತಿ ಏಳು ವರ್ಷಗಳಲ್ಲೇ ಅತಿ ಕಡಿಮೆ ಎನ್ನಿಸುವಷ್ಟು ಶೇ, 5 ರಷ್ಟು ದಾಖಲಾಗಿದೆ.ವರ್ಷದ ಹಿಂದೆ  ಇದು ಶೇ, 8 ರಷ್ಟಿತ್ತು. 

ದೇಶಿಯ ದುರ್ಬಲತೆ ಕಾರಣದಿಂದಾಗಿ 2019-20ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ 0.3 ರಷ್ಟು ಏರಿಕೆ ಕಂಡು ಶೇ 7 ಕ್ಕೆ ತಲುಪಿದೆ. 2020-21ರ ಆರ್ಥಿಕ ವರ್ಷದಲ್ಲಿ ಶೇ. 7.2 ರಷ್ಟು ತಲುಪುವ ಸಾಧ್ಯತೆ ಇದೆ. ಉತ್ಪಾದನಾ ಕ್ಷೇತ್ರ ಹಾಗೂ ಕೃಷಿ ಉತ್ಪಾದನೆ ಕುಂಠಿತದ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತವಾಗಿದೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com