ಡಾಲರ್ ಎದುರು ಕುಸಿದ ರೂಪಾಯಿ ಮೌಲ್ಯ!

ಆರ್ಥಿಕ ಹಿಂಜರಿತದಿಂದ ಭಾರತೀಯ ಉದ್ಯಮ ವಲಯ ಕಂಗಾಲಾಗಿರುವಂತೆಯೇ ಇತ್ತ ಗಾಯದ ಮೇಲೆ ಬರೆ ಎಂಬಂತೆ ರೂಪಾಯಿ ಮೂಲ್ಯ ಕೂಡ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಆರ್ಥಿಕ ಹಿಂಜರಿತದಿಂದ ಭಾರತೀಯ ಉದ್ಯಮ ವಲಯ ಕಂಗಾಲಾಗಿರುವಂತೆಯೇ ಇತ್ತ ಗಾಯದ ಮೇಲೆ ಬರೆ ಎಂಬಂತೆ ರೂಪಾಯಿ ಮೂಲ್ಯ ಕೂಡ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಇದು ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯ ಬರೊಬ್ಬರಿ 24 ಪೈಸೆಯಷ್ಟು ಕುಸಿತಗೊಂಡಿದೆ. ಆ ಮೂಲಕ ಪ್ರಸ್ತುತ ರೂಪಾಯಿ ಬೆಲೆ ಪ್ರತೀ ಡಾಲರ್ ಗೆ 71.36 ರೂ ಗಳಲ್ಲಿ ವಹಿವಾಟು ನಡೆಸುತ್ತಿದೆ.

ಇನ್ನು ಇಂದಿನ ರೂಪಾಯಿ ಮೌಲ್ಯ ಕುಸಿತಕ್ಕೆ ಅಮೆರಿಕದ ಫೆಡರಲ್ ಬ್ಯಾಂಕ್ ನ ನಿಯಮ ಕಾರಣ ಎನ್ನಲಾಗುತ್ತಿದ್ದು, ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರವನ್ನು ಕಡಿತಗೊಳಿಸಿತು. ಪರಿಣಾಮ ಇದೀಗ ಡಾಲರ್ ಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರೂಪಾಯಿ ಮೌಲ್ಯ ಕುಸಿದಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಸಾಲದ ಮೇಲಿನ ಬಡ್ಡಿದರದಲ್ಲಿ 1.75ರಿಂದ 2.0ರಷ್ಟು (25 ಬೇಸಿಸ್ ಪಾಯಿಂಟ್ ಗಳು) ಕಡಿತಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com