ಐಎಲ್ ಆ್ಯಂಡ್ ಎಫ್ಎಸ್ ಮಾಜಿ ಎಂಡಿ, ಸಿಇಒ ರಮೇಶ್ ಬಾವಾ ಬಂಧನ

ಸಾಲದ ಸುಳಿಯಲ್ಲಿ ಸಿಲುಕಿದ್ದ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವೀಸಸ್(ಐಎಲ್ ಆಂಡ್ ಎಫ್‌ಎಸ್‌) ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ....
ರಮೇಶ್ ಬಾವಾ
ರಮೇಶ್ ಬಾವಾ
ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿದ್ದ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಶಿಯಲ್ ಸರ್ವೀಸಸ್(ಐಎಲ್ ಆಂಡ್ ಎಫ್‌ಎಸ್‌) ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಣಾಧಿಕಾರಿ(ಸಿಇಒ) ರಮೇಶ್ ಬಾವಾ ಅವರನ್ನು ಬಂಧಿಸಲಾಗಿದೆ.
ಎರಡು ದಿನಗಳ ಹಿಂದೆ ಬಂಧನದಿಂದ ರಕ್ಷಣೆ ಕೋರಿ ಬಾವಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಎಸ್ಎಫ್ಐಒ(ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಶನ್ ಆಫೀಸ್) ಬಂಧಿಸಿದೆ.
91 ಸಾವಿರ ಕೋಟಿ ರುಪಾಯಿ ಸಾಲದಲ್ಲಿರುವ ಐಎಲ್ ಆ್ಯಂಡ್ ಎಫ್ಎಸ್ ಕಂಪನಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಅದೇ ಕಾರಣಕ್ಕೆ ರಮೇಶ್ ಅವರನ್ನೂ ಬಂಧಿಸಲಾಗಿದೆ.
ಏಪ್ರಿಲ್ 1 ರಂದು ಐಎಲ್ ಆ್ಯಂಡ್ ಎಫ್ ಎಎಸ್ ನ ಪದಚ್ಯುತ ಕಾರ್ಯನಿರ್ವಾಹಕ ನಿರ್ದೇಶಕ ಹರಿಶಂಕರನ್ ಅವರನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com