ಗ್ರಾಹಕರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕಿದೆ : ಜೊಮ್ಯಾಟೊ ಆ್ಯಪ್ ಅನ್ ಇನ್ ಸ್ಟಾಲ್ ಮಾಡಿ ಪ್ರತಿಭಟನೆ

ಇದೀಗ ಗ್ರಾಹಕರಿಗೆ ಧರ್ಮದ ಬಗ್ಗೆ ಪ್ರಶ್ನಿಸುವ ಹಕ್ಕಿದೆ ಎಂದು ಹೇಳಿ ಪುಡ್ ಆರ್ಡರ್ ರದ್ದು ಮಾಡಿದ್ದ ಜೊಮ್ಯಾಟೊ ಗ್ರಾಹಕರಿಗೆ ಬೆಂಬಲ ಸೂಚಿಸಿ ಟ್ವೀಟಿಗರು ಜೊಮ್ಯಾಟೊ ಆ್ಯಪ್ ಅನ್ ಇನ್ ಸ್ಟಾಲ್ ಮಾಡಿ ಪ್ರತಿಭಟಿಸಿದ್ದಾರೆ
ಜೊಮ್ಯಾಟೊ ಅನ್ ಇನ್ ಸ್ಟಾಲ್
ಜೊಮ್ಯಾಟೊ ಅನ್ ಇನ್ ಸ್ಟಾಲ್
ಬೆಂಗಳೂರು: ಹಿಂದುವಲ್ಲದ  ಆಹಾರ ಪೂರೈಕೆ ವ್ಯಕ್ತಿಯಿಂದ ಆಹಾರ ಸ್ವೀಕರಿಸುವುದಿಲ್ಲ ಎಂದು ಹೇಳಿ ಜೊಮ್ಯಾಟೊ ಗ್ರಾಹಕರೊಬ್ಬರು ಪುಡ್ ಆರ್ಡರ್ ರದ್ದು ಮಾಡಿದ್ದರು.ಇದಕ್ಕೆ ಪ್ರತಿಕ್ರಿಯಿಸಿದ ಜೊಮ್ಯಾಟೊ ಆಹಾರಕ್ಕೆ ಧರ್ಮವಿಲ್ಲ, ಆಹಾರವೇ ಧರ್ಮ ಎಂದಿತ್ತು. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಇದೀಗ ಗ್ರಾಹಕರಿಗೆ  ಧರ್ಮದ  ಬಗ್ಗೆ ಪ್ರಶ್ನಿಸುವ ಹಕ್ಕಿದೆ ಎಂದು ಹೇಳಿ ಪುಡ್  ಆರ್ಡರ್ ರದ್ದು ಮಾಡಿದ್ದ ಜೊಮ್ಯಾಟೊ ಗ್ರಾಹಕರಿಗೆ ಬೆಂಬಲ ಸೂಚಿಸಿ ಟ್ವೀಟಿಗರು ಜೊಮ್ಯಾಟೊ ಆ್ಯಪ್ ಅನ್ ಇನ್ ಸ್ಟಾಲ್ ಮಾಡಿ ಪ್ರತಿಭಟಿಸಿದ್ದಾರೆ. #ZomatoUninstalled #boycottzomato ಇಂದು ಟ್ವೀಟರ್ ನಲ್ಲಿ ಟಾಪ್ ಟ್ರೆಂಡ್ ಆಗಿದೆ.
ಇದೇ ವೇಳೆ ಹಿಂದು ಅಲ್ಲದ ಆಹಾರ ಪೂರೈಕೆ ವ್ಯಕ್ತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜಬಲ್ಪುರ್ ಟ್ವೀಟಿಗರ ವಿರುದ್ಧ ನೋಟಿಸ್ ಕಳುಹಿಸಲು ಮಧ್ಯ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com