ಈರುಳ್ಳಿ ದರ ಏರಿಕೆ ನಡುವೆಯೇ ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ; ಎಲ್ ಪಿಜಿ ದರ ಏರಿಕೆ

ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಗ್ರಾಹಕರಿಗೆ ಮತ್ತೆ ಎಲ್ ಪಿಜಿ ದರ ಏರಿಕೆ ಮೂಲಕ ಬರೆ ಎಳೆದಂತಾಗಿದೆ.

Published: 03rd December 2019 11:03 AM  |   Last Updated: 03rd December 2019 11:03 AM   |  A+A-


LPG cylinder prices increase

ಸಂಗ್ರಹ ಚಿತ್ರ

Posted By : Srinivasamurthy VN
Source : PTI

ನವದೆಹಲಿ: ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಗ್ರಾಹಕರಿಗೆ ಮತ್ತೆ ಎಲ್ ಪಿಜಿ ದರ ಏರಿಕೆ ಮೂಲಕ ಬರೆ ಎಳೆದಂತಾಗಿದೆ.

ಹೌದು.. ಎಲ್ ಪಿಜಿ ಸಿಲಿಂಡರ್ ಗಳ ಮೇಲಿನದ ದರ ಕೂಡ ಏರಿಕೆಯಾಗಿದ್ದು. ಡಿಸೆಂಬರ್ 1ರಿಂದಲೇ ನೂತನ ದರಗಳು ಜಾರಿಯಾಗಿವೆ.  ದೇಶದ ವಿವಿಧ ರಾಜ್ಯಗಳಲ್ಲಿ ಎಲ್ ಪಿಜಿ ದರಗಳಲ್ಲಿ ಸರಾಸರಿ 13.20 ರಿಂದ 13.45 ರೂವರೆಗೆ ದರ ಏರಿಕೆಯಾಗಿದೆ. 

ಉತ್ತರ ಪ್ರದೇಶದಲ್ಲಿ  ಎಲ್‌ಪಿಜಿಯ ಬೆಲೆ 13.20 ರೂ. ಏರಿಕೆಯಾಗಿದ್ದು, ಇದರೊಂದಿಗೆ ಎಲ್‌ಪಿಜಿ(LPG)ಯ 14.2 ಕೆಜಿ ಸಿಲಿಂಡರ್ ಬೆಲೆ ಈಗ 730 ರೂ.ಗೆ ಏರಿದೆ. ಅದೇ ಸಮಯದಲ್ಲಿ, ವಾಣಿಜ್ಯ ಸಿಲಿಂಡರ್‌ನ ಬೆಲೆಯೂ 7.30 ರೂ. ಈಗ 19 ಕೆಜಿ ಸಿಲಿಂಡರ್ 1295.50 ರೂ. ಆಗಿದೆ. ಅಷ್ಟೇ ಅಲ್ಲ ಇದರೊಂದಿಗೆ 5 ಕೆಜಿ ಸಣ್ಣ ಸಿಲಿಂಡರ್ ಬೆಲೆ ಕೂಡ 5.41 ರೂ. ದುಬಾರಿಯಾಗಿದೆ. ಸಣ್ಣ ಸಿಲಿಂಡರ್ ಬೆಲೆಯನ್ನು 269 ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ದರ 695 ರೂಗೆ ಏರಕೆಯಾಗಿದ್ದು, ಮುಂಬೈನಲ್ಲಿ 665 ರೂಗಳಾಗಿವೆ. ಚೆನ್ನೈನಲ್ಲಿ 714 ರೂ ಗಳಾಗಿದ್ದು, ಕೋಲ್ಕತಾದಲ್ಲಿ 725 ರೂಗಳಿಗೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  697.50 ರೂಗೆ ಏರಿಕೆಯಾಗಿದೆ. ವಿಶೇಷವೆಂದರೆ, ಕಳೆದ 4 ತಿಂಗಳಲ್ಲಿ ಎಲ್‌ಪಿಜಿಯ ಬೆಲೆ 118 ರೂ. ದುಬಾರಿಯಾಗಿದೆ. 

Stay up to date on all the latest ವಾಣಿಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp