ನಷ್ಟದಲ್ಲಿರುವ ಜೆಟ್ ಏರ್ವೇಸ್ ಉದ್ಯೋಗಳನ್ನು ಉಳಿಸಿಕೊಳ್ಳಲು ಉರುಳಿಸಿದ ದಾಳ ಎಂಥಹದ್ದು ಗೊತ್ತೇ?

ನಷ್ಟದಲ್ಲಿರುವ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ಉದ್ಯೋಗಗಳನ್ನು ಉಳಿಸಿಕೊಳ್ಳುವುದಕ್ಕೆ ಹೊಸದೊಂದು ಮಾರ್ಗ ಕಂಡುಕೊಂಡಿದೆ.

Published: 22nd March 2019 12:00 PM  |   Last Updated: 22nd March 2019 01:16 AM   |  A+A-


Desperate gamble? SpiceJet tapped to save jobs at Jet Airways, say sources

ನಷ್ಟದಲ್ಲಿರುವ ಜೆಟ್ ಏರ್ವೇಸ್ ಉದ್ಯೋಗಳನ್ನು ಉಳಿಸಿಕೊಳ್ಳಲು ಉರುಳಿಸಿದ ದಾಳ ಎಂಥಹದ್ದು ಗೊತ್ತೇ?

Posted By : SBV SBV
Source : Online Desk
ನವದೆಹಲಿ: ನಷ್ಟದಲ್ಲಿರುವ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ಉದ್ಯೋಗಗಳನ್ನು ಉಳಿಸಿಕೊಳ್ಳುವುದಕ್ಕೆ ಹೊಸದೊಂದು ಮಾರ್ಗ ಕಂಡುಕೊಂಡಿದೆ. 

ಜೆಟ್ ಏರ್ವೇಸ್ ಸಂಸ್ಥೆಯಲ್ಲಿ ಹತ್ತಿರ ಹತ್ತಿರ 23 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ವಿಮಾನ ಸಂಸ್ಥೆಯ ಸದ್ಯ ಪರಿಸ್ಥಿತಿಯಲ್ಲಿ ಉದ್ಯೋಗ ಉಳಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದ್ದು ಜೆಟ್ ಏರ್ವೇಸ್ ಇದಕ್ಕಾಗಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆಗೆ ಗಾಳ ಹಾಕಿದೆ. 

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಜೆಟ್ ಏರ್ವೇಸ್ ನಲ್ಲಿರಿವ ಉದ್ಯೋಗಗಳನ್ನು ಉಳಿಸಿವುದೂ ಸಹ ಅನಿವಾರ್ಯವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಪೈಕಿ ಸ್ಥಗಿತಗೊಂಡಿರುವ ಉಳಿದಿರುವ 40 ವಿಮಾನಗಳನ್ನು ಖರೀದಿಸುವಂತೆ ಮನವಿ ಮಾಡುವ ಆಯ್ಕೆಯನ್ನೂ ಪರಿಗಣಿಸಿದೆ. ಸ್ಪೈಸ್ ಜೆಟ್ ಜೊತೆಗೆ ಇನ್ನೂ ಹಲವು ವಿಮಾನ ಸಂಸ್ಥೆಗಳೊಂದಿಗೆ ಸರ್ಕಾರ ಮಾತುಕತೆಗೆ ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp