ಪೆಟ್ರೋಲ್ ದರ ಇಳಿಕೆ, ಡೀಸೆಲ್ ದರವೂ ಕೊಂಚ ಅಗ್ಗ!

ತೈಲೋತ್ಪನ್ನಗಳ ದರದಲ್ಲಿ ಕಡಿತವಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರಲ್ಲಿ 25 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಪೆಟ್ರೋಲ್ ದರ ಇಳಿಕೆ, ಡೀಸೆಲ್ ದರವೂ ಕೊಂಚ ಅಗ್ಗ!
ಬೆಂಗಳೂರು: ತೈಲೋತ್ಪನ್ನಗಳ ದರದಲ್ಲಿ ಕಡಿತವಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರಲ್ಲಿ 25 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಮಂಗಳವಾರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 25 ಪೈಸೆ ಇಳಿಕೆಯಾಗಿ, ದರ 71.18 ರೂ ಗೆ ಇಳಿಕೆಯಾಗಿದ್ದು, ಡೀಸೆಲ್ ದರ ಕೂಡ 12 ಪೈಸೆಗಳ ಇಳಿಕೆಯೊಂದಿಗೆ 65.86ರೂ ಆಗಿದೆ. ಅಂತೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರಲ್ಲಿ 26 ಪೈಸೆಯಷ್ಚು ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 73.47 ರೂಗೆ ಕಡಿತವಾಗಿದೆ. ಇನ್ನು ಡೀಸೆಲ್ ದರದಲ್ಲಿ ಕೂಡ 12 ಪೈಸೆ ಇಳಿಕೆಯಾಗಿ ಡೀಸೆಲ್‌ ದರ 67.98 ರೂ ಗಳಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರದಲ್ಲಿ 24 ಪೈಸೆ ಕಡಿತವಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್‌ ದರ 76.77 ರೂ ಗಳಾಗಿದೆ. ಡೀಸೆಲ್ ದರದಲ್ಲಿ 12 ಪೈಸೆ ಇಳಿಕೆಯಾಗಿ 68.98 ರೂಗಳಾಗಿದೆ. ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ದರಲ್ಲಿ 24 ಪೈಸೆ ಇಳಿಕೆ ಪೈಸೆ ಇಳಿಕೆಯಾಗಿ ಪೆಟ್ರೋಲ್ ದರ 73.85 ರೂಗಳಾಗಿದೆ. ಡೀಸೆಲ್‌ ಬೆಲೆಯಲ್ಲಿ 12 ಪೈಸೆ ಇಳಿಕೆಯಾಗಿ ದರ 69.59 ರೂ ಗಳಾಗಿದೆ. 
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಪೆಟ್ರೋಲ್‌ ಬೆಲೆ 73.23 ರೂಗಳಾಗಿದ್ದು, ಡೀಸೆಲ್ ಬೆಲೆ 67.59 ರೂ ಗಳಿಗೆ ಇಳಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com