ಸೆನ್ಸೆಕ್ಸ್ 39,714.20 ಕ್ಕೆ ಕುಸಿತ, ನಿಫ್ಟಿ 11,922.80 ಕ್ಕೆ ಇಳಿಕೆ

ಏಷ್ಯಾ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟಿನಿಂದ ಸ್ಥಳೀಯ ಹೂಡಿಕೆದಾರರು ಪೇಟೆಯಲ್ಲಿ ಲಾಭದ ಪ್ರವೃತ್ತಿ ತೋರಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್, ಶುಕ್ರವಾರ 117.77 ಅಂಕ ಕುಸಿತ ಕಂಡು 39,714.20 ಕ್ಕೆ ಇಳಿದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ; ಏಷ್ಯಾ ಮಾರುಕಟ್ಟೆಗಳಲ್ಲಿನ ದುರ್ಬಲ ವಹಿವಾಟಿನಿಂದ ಸ್ಥಳೀಯ ಹೂಡಿಕೆದಾರರು ಪೇಟೆಯಲ್ಲಿ ಲಾಭದ ಪ್ರವೃತ್ತಿ ತೋರಿದ್ದರಿಂದ ಮುಂಬೈ ಷೇರು ವಿನಿಮಯ ಕೇಂದ್ರದ  ಸೂಚ್ಯಂಕ ಸೆನ್ಸೆಕ್ಸ್, ಶುಕ್ರವಾರ 117.77 ಅಂಕ ಕುಸಿತ ಕಂಡು 39,714.20 ಕ್ಕೆ ಇಳಿದಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ -ಎನ್ಎಸ್ಇ  ಸೂಚ್ಯಂಕ ನಿಫ್ಟಿ ಸಹ 23.10 ಅಂಕ ಕುಸಿದು 11,922.80 ಕ್ಕೆ ಇಳಿದಿದೆ.

ಗುರುವಾರ 329 ಅಂಕ ಏರಿಕೆ ದಾಖಲಿಸಿದ್ದ ಸೆನ್ಸೆಕ್ಸ್  ಇಂದು  ಆರಂಭಿಕ ಹಂತದಲ್ಲಿ 167 ಅಂಕ ಏರಿಕೆ ಕಂಡು 39,998.91 ಕ್ಕೆ ತಲುಪಿತ್ತು. ನಂತರ 291 ಅಂಕ ಏರಿಕೆಯೊಂದಿಗೆ 40 ಸಾವಿರದ ಗಡಿದಾಟಿ 40,122.34 ಕ್ಕೆ ತಲುಪಿತ್ತು.ನಂತರ ಚಂಚಲತೆಯ ವಹಿವಾಟಿನಲ್ಲಿ ತೀವ್ರ ಏರಿಳಿತ ಕಂಡ ಸೆನ್ಸೆಕ್ಸ್ ಮಧ್ಯಾಹ್ನ 457 ಅಂಕ ಇಳಿಕೆ ಕಂಡು 39,374.24ಕ್ಕೆ ಕುಸಿಯಿತು. ಅಂತಿಮವಾಗಿ, 117.77 ಅಂಕ ಇಳಿಕೆಯೊಂದಿಗೆ 39,714.20ರಲ್ಲಿ ದಿನದಾಂತ್ಯ ಕಂಡಿದೆ.

ಎಫ್ಎಂಸಿಜಿ, ಆಟೋ, ಲೋಹ ಮತ್ತು ವಿದ್ಯುತ್‌ ಮುಂತಾದ ವಲಯಗಳ ಸೂಚ್ಯಂಕಗಳಲ್ಲಿನ ನಷ್ಟ ಮಾರುಕಟ್ಟೆಯನ್ನು ದುರ್ಬಲಗೊಳಿಸಿತು. ಯೆಸ್‌ ಬ್ಯಾಂಕ್, ಐಟಿಸಿ, ಎಮ್ ಅಂಡ್‌ ಎಮ್ ಹಾಗೂ ವಿಇಡಿಎಲ್‌ ಷೇರುಗಳು ತೀವ್ರ ನಷ್ಟ ಕಂಡಿವೆ.

ಆದರೂ, ಇಂಧನ, ಐಟಿ, ತೈಲ ಮತ್ತು ಅನಿಲ ಹಾಗೂ ತಂತ್ರಜ್ಞಾನ ವಲಯಗಳ ಷೇರುಗಳಿಗೆ ಹೊಸದಾಗಿ ಖರೀದಿ ಬೆಂಬಲ ಹೆಚ್ಚಾದ್ದರಿಂದ ಮಾರುಕಟ್ಟೆ ಮತ್ತಷ್ಟು ನಷ್ಟವಾಗುವುದನ್ನು ತಡೆದಿದೆ ಪೇಟೆಯ ಮಧ್ಯವರ್ತಿಗಳು ತಿಳಿಸಿದ್ದಾರೆ.ಏಷ್ಯನ್ ಪೇಂಟ್ಸ್, ಟಿಸಿಎಸ್, ಒಎನ್‌ಜಿಸಿ ಮತ್ತು ಇಂಡಸ್ ಇಂಡ್‌ ಬ್ಯಾಂಕ್‌ ಷೇರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿ ಲಾಭ ಗಳಿಸಿವೆ.

ಬಿಎಸ್ಇನ ಒಟ್ಟಾರೆ ಗಾತ್ರ ದುರ್ಬಲವಾಗಿತ್ತು. 1,024 ಕಂಪೆನಿಗಳ ಷೇರುಗಳು ನಷ್ಟ ಕಂಡರೆ, 1,555 ಕಂಪೆನಿಗಳ ಷೇರುಗಳು ಇಳಿಕೆ ಕಂಡಿವೆ. ಉಳಿದಂತೆ 158 ಕಂಪೆನಿ ಷೇರುಗಳು ಯಥಾಸ್ಥಿತಿಯಲ್ಲಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com