ಉತ್ತರಾಖಂಡ್ ಅಧಿಕಾರಿಯ ವಿದ್ಯುತ್ ಬಿಲ್ ಮೊತ್ತ ಕೇಳಿದರೆ ಶಾಕ್ ಆಗ್ತೀರ! ವಿದ್ಯುತ್ ದುರ್ಬಳಕೆಗೆ ಹೈಕೋರ್ಟ್ ಕಿಡಿ!

ಉತ್ತರಾಖಂಡ್ ನ ವಿದ್ಯುತ್ ನಿಗಮದ ಅಧಿಕಾರಿಯೊಬ್ಬರು ವಾಸ್ತವದಲ್ಲಿ 4 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಿದೆ. ಆದರೆ ಈ ಪುಣ್ಯಾತ್ಮ ತಿಂಗಳಿಗೆ ಕೇವಲ 425 ರೂಪಾಯಿ ವಿದ್ಯುತ್ ಬಿಲ್ ಕಟ್ಟಿ ಆರಾಮಾಗಿದ್ದರು. 
ಉತ್ತರಾಖಂಡ್ ಅಧಿಕಾರಿಯ ವಿದ್ಯುತ್ ಬಿಲ್ ಮೊತ್ತ ಕೇಳಿದರೆ ಶಾಕ್ ಆಗ್ತೀರ! ವಿದ್ಯುತ್ ದುರ್ಬಳಕೆಗೆ ಹೈಕೋರ್ಟ್ ಕಿಡಿ!
ಉತ್ತರಾಖಂಡ್ ಅಧಿಕಾರಿಯ ವಿದ್ಯುತ್ ಬಿಲ್ ಮೊತ್ತ ಕೇಳಿದರೆ ಶಾಕ್ ಆಗ್ತೀರ! ವಿದ್ಯುತ್ ದುರ್ಬಳಕೆಗೆ ಹೈಕೋರ್ಟ್ ಕಿಡಿ!

ಉತ್ತರಾಖಂಡ್: ಸಾವಿರಾರು ರೂಪಾಯಿ ಟೆಲಿಫೋನ್ ಬಿಲ್, ಲಕ್ಷಗಟ್ಟಲೆ ವಿದ್ಯುತ್ ಬಿಲ್ ಬಂದಿರುವ ಅಪರೂಪದ ವರದಿಗಳನ್ನು ನೀವೆಲ್ಲರೂ ಓದಿಯೇ ಇರುತ್ತೀರ. ಇಂತಹ ಪ್ರಕರಣಗಳಲ್ಲಿ ಬಹುತೇಕ ಬಾರಿ ಯಾವುದೋ ತಪ್ಪಿನಿಂದ ಬೃಹತ್ ಮೊತ್ತದ ಬಿಲ್ ಬಂದಿರುತ್ತದೆ. ಆದರೆ ಉತ್ತರಾಖಂಡ್ ನ ವಿದ್ಯುತ್ ನಿಗಮದ ಅಧಿಕಾರಿಯೊಬ್ಬರು ವಾಸ್ತವದಲ್ಲಿ 4 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಿದೆ. ಆದರೆ ಈ ಅಧಿಕಾರಿ ತಿಂಗಳಿಗೆ ಕೇವಲ 425 ರೂಪಾಯಿ ವಿದ್ಯುತ್ ಬಿಲ್ ಕಟ್ಟಿ ಆರಾಮಾಗಿದ್ದರು. 

25 ತಿಂಗಳಲ್ಲಿ ಬರೊಬ್ಬರಿ 92,000 ಯುನಿಟ್ ಗಳಷ್ಟು ವಿದ್ಯುತ್ ಬಳಕೆ ಮಾಡಿದ್ದ ವ್ಯವಸ್ಥಾಪಕ ನಿರ್ದೇಶಕ ಸಿಕೆ ತಮ್ತಾ 4 ಲಕ್ಷ ರೂಪಾಯಿ ಬಿಲ್ ಪಾವತಿ ಮಾಡಬೇಕಿತ್ತು. ಆದರೆ ತಿಂಗಳಿಗೆ ಕೇವಲ 425 ರೂಪಾಯಿ ಪಾವತಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಉತ್ತರಾಖಂಡ್ ಹೈಕೋರ್ಟ್  ಉತ್ತರಾಖಂಡ್ ವಿದ್ಯುತ್ ನಿಗಮ (ಯುಪಿಸಿಎಲ್) ದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದು ಕೇವಲ ವ್ಯವಸ್ಥಾಪಕ ನಿರ್ದೇಶಕರ ಕಥೆಯಲ್ಲ. ಬದಲಾಗಿ ವಿದ್ಯುತ್ ನಿಗಮದಲ್ಲಿರುವ ಬಹುತೇಕ ಅಧಿಕಾರಿಗಳು, ಸಿಬ್ಬಂದಿಗಳು ನಿವೃತ್ತಿಯ ನಂತರವೂ ಸಹ ಇದೇ ರೀತಿಯ ಸವಲತ್ತುಗಳನ್ನು ಪಡೆಯುತ್ತಿದ್ದಾ ರೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಇದನ್ನು ಗಮನಿಸಿರುವ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ರಮೇಶ್ ರಂಗನಾಥನ್ ಹಾಗೂ ನ್ಯಾ. ಅಲೋಕ್ ಕುಮಾರ್ ವರ್ಮಾ, ಅಧಿಕಾರಿಗಳಿಂದ ವಿದ್ಯುತ್ ಹಾಗೂ ಅಧಿಕಾರದ ದುರ್ಬಳಕೆಯಾಗುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com