ಪೆಟ್ರೋಲ್ ಬೆಲೆಯಲ್ಲಿ 1 ರೂ. ಇಳಿಕೆ, ಗಣನೀಯ ಪ್ರಮಾಣದಲ್ಲಿ ತಗ್ಗಿದ ಡೀಸೆಲ್ ದರ

ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯತ್ತ ಮುಖ ಮಾಡಿದ್ದು, ಈ ತಿಂಗಳಲ್ಲಿ ಪೆಟ್ರೋಲ್ ದರದಲ್ಲಿ 1 ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

Published: 09th October 2019 01:10 AM  |   Last Updated: 09th October 2019 12:01 PM   |  A+A-


Petrol price down by Re 1 this month, diesel rates too down sharply: Sources

ಸಂಗ್ರಹ ಚಿತ್ರ

Posted By : Srinivasamurthy VN
Source : PTI

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯತ್ತ ಮುಖ ಮಾಡಿದ್ದು, ಈ ತಿಂಗಳಲ್ಲಿ ಪೆಟ್ರೋಲ್ ದರದಲ್ಲಿ 1 ರೂ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ಸುದ್ದಿಸಂಸ್ಛೆ ವರದಿ ಮಾಡಿರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಳೆದ ಐದು ದಿನಗಳಿಂದ ಸತತ ಇಳಿಕೆ ಕಂಡು ಬಂದಿದ್ದು, ಕಳೆದ 5 ದಿನಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 95 ಪೈಸೆ ಹಾಗೂ ಡಿಸೇಲ್ ಬೆಲೆಯಲ್ಲಿ 71 ಪೈಸೆ ಇಳಿಕೆಯಾಗಿದೆ. 

ಕಳೆದ ಅ.2ರಂದು 77.10 ರೂ. ಇದ್ದ ಪೆಟ್ರೋಲ್ ದರ ಮಂಗಳವಾರ 76.05 ರೂ.ಗೆ ತಲುಪಿತ್ತು. ಪ್ರತಿ ಲೀಟರ್​ಗೆ 69.74 ರೂ. ಇದ್ದ ಡೀಸೆಲ್ ದರ ಮಂಗಳವಾರ 69.03 ರೂ.ಗೆ ಇಳಿಕೆಯಾಗಿದೆ.

ಇನ್ನು ದೆಹಲಿಯಲ್ಲಿ ಪೆಟ್ರೋಲ್ ದರ 73.76ರೂ. ಆಗಿದ್ದು, ಡಿಸೇಲ್ ದರ 66.91 ರೂ. ತಲುಪಿತ್ತು. ಮುಂಬೈನಲ್ಲಿ ಪೆಟ್ರೋಲ್ ದರ  79.37 ರೂ ಮತ್ತು ಡೀಸೆಲ್ ದರ 70.14 ರೂ, ಕೋಲ್ಕತಾದಲ್ಲಿ  ಪೆಟ್ರೋಲ್ ದರ 76.40 ರೂ., ಡೀಸೆಲ್ ದರ 69.27 ರೂ, ಚೆನ್ನೈನಲ್ಲಿ ಪೆಟ್ರೋಲ್ ದರ  76.61 ರೂ, ಡೀಸೆಲ್ ದರ 70.68 ರೂ. ಆಗಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ  76.055 ರೂ ಇದ್ದು, ಡೀಸೆಲ್ ದರ 69.035 ರೂ ಗಳಾಗಿವೆ.

Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp