ಜಾಗತಿಕ ವಹಿವಾಟಿನ ಫಲಶ್ರುತಿ-ಮತ್ತೆ ತುಟ್ಟಿಯಾದ ಬಂಗಾರ

ಜಾಗತಿಕ ಮಾರುಕಟ್ಟೆ ಏರಿಳಿತಕ್ಕನುಗುಣವಾಗಿ ಭಾರತ ಚಿನ್ನದ ಮಾರುಕಟ್ಟೆಯಲ್ಲಿ ಸಹ ಚಿನ್ನದ ದರ ಏರಿಕೆಯಾಗಿದೆ. ನವದೆಹಲಿಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು 10 ಗ್ರಾಂಗೆ 130 ರೂ. ಏರಿಕೆಯಾಗಿ 38,690 ರೂ.ಗೆ ತಲುಪಿದೆ.ಅಲ್ಲದೆ ಬೆಳ್ಳಿ ಸಹ ಲೋಗ್ರಾಂಗೆ 900 ರೂ ಏರಿಕೆ ಕಂಡಿದ್ದು  47,990 ರೂ.ಗೆ ಏರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಾಗತಿಕ ಮಾರುಕಟ್ಟೆ ಏರಿಳಿತಕ್ಕನುಗುಣವಾಗಿ ಭಾರತ ಚಿನ್ನದ ಮಾರುಕಟ್ಟೆಯಲ್ಲಿ ಸಹ ಚಿನ್ನದ ದರ ಏರಿಕೆಯಾಗಿದೆ. ನವದೆಹಲಿಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು 10 ಗ್ರಾಂಗೆ 130 ರೂ. ಏರಿಕೆಯಾಗಿ 38,690 ರೂ.ಗೆ ತಲುಪಿದೆ.ಅಲ್ಲದೆ ಬೆಳ್ಳಿ ಸಹ ಲೋಗ್ರಾಂಗೆ 900 ರೂ ಏರಿಕೆ ಕಂಡಿದ್ದು  47,990 ರೂ.ಗೆ ಏರಿದೆ.

ಶನಿವಾರ, ಇಲ್ಲಿನ ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ ಚಿನ್ನ 10 ಗ್ರಾಂಗೆ 38,560 ರೂ. ಆಗಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆ ನ್ಯೂಯಾರ್ಕ್ ನಲ್ಲಿ ಔನ್ಸ್ ಗೆ 1,518 ಡಾಲರ್‌ ಆಗಿದೆ.ಬೆಳ್ಳಿ ಔನ್ಸ್ ಗೆ 17.87 ಡಾಲರ್‌ ತಲುಪಿದೆ.

ಸ್ಥಳೀಯ ಚಿನ್ನದ ಬೆಲೆಗಳು COMEX ಟರ್ನ್ಯಾಷನಲ್ ಸ್ಪಾಟ್ ಚಿನ್ನದ ಬೆಲೆಗಳು 1.1 ಡಾಲರ್ ನಿಂದ 1,518 ಡಾಲರ್ ಗೆ ಏರಿಕೆಯಾಗಿದೆ.ಎಂದು ಎಚ್ ಡಿಎಫ್ ಸಿ ಸೆಕ್ಯುರಿಟೀಸ್ ನ ಲಹಾ (ಪಿಸಿಜಿ) ಮುಖ್ಯಸ್ಥ ದೇವರ್ಶ್ ವಕೀಲ್ ಹೇಳಿದ್ದಾರೆ.

ಏತನ್ಮಧ್ಯೆ, ರೂಪಾಯಿ ಮೌಲ್ಯ ಡಾಲರ್ ಎದುರು 9 ಪೈಸೆ ಇಳಿಕೆಯಾಗಿ 71.03 ಕ್ಕೆ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com