ಮಹಿಳೆಯರ ಮೊಗದಲ್ಲಿ ಹಿಗ್ಗು ತಂದ ಚಿನ್ನ! ಬಂಗಾರದ ಬೆಲೆಯಲ್ಲಿ ಅಲ್ಪ ಇಳಿಕೆ

 ರೂಪಾಯಿ ಪ್ರಾಬಲ್ಯ ಹಾಗೂ  ದುರ್ಬಲ ಅಂತರರಾಷ್ಟ್ರೀಯ ವಹಿವಾಟಿನ ಸೂಚನೆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಶುಕ್ರವಾರ 10 ಗ್ರಾಂಗೆ 121 ರೂ ಇಳಿಕೆಯಾಗಿ  38,564 ರೂ.ಗೆ ತಲುಪಿದೆ. ಬೆಳ್ಳಿ ಕೂಡ ಬೆಲೆಯಲ್ಲಿ ಅಲ್ಪ ಇಳಿಕೆ ದಾಖಲಿಸಿದ್ದುಪ್ರತಿ ಕಿಲೋಗ್ರಾಂಗೆ 851 ರೂ ಇಳಿಕೆ ಕಂಡು 46,384 ರೂ. ತಲುಪಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರೂಪಾಯಿ ಪ್ರಾಬಲ್ಯ ಹಾಗೂ  ದುರ್ಬಲ ಅಂತರರಾಷ್ಟ್ರೀಯ ವಹಿವಾಟಿನ ಸೂಚನೆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಶುಕ್ರವಾರ 10 ಗ್ರಾಂಗೆ 121 ರೂ ಇಳಿಕೆಯಾಗಿ  38,564 ರೂ.ಗೆ ತಲುಪಿದೆ. ಬೆಳ್ಳಿ ಕೂಡ ಬೆಲೆಯಲ್ಲಿ ಅಲ್ಪ ಇಳಿಕೆ ದಾಖಲಿಸಿದ್ದುಪ್ರತಿ ಕಿಲೋಗ್ರಾಂಗೆ 851 ರೂ ಇಳಿಕೆ ಕಂಡು 46,384 ರೂ. ತಲುಪಿದೆ. 

24 ಕಾರಟ್ ಚಿನ್ನವು ದೆಹಲಿಯಲ್ಲಿ 10 ಗ್ರಾಂಗೆ 38,685 ರೂ. ಆಗಿದ್ದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಮುಖ್ಯಸ್ಥ (ಸಲಹಾ-ಪಿಸಿಜಿ) ದೇವರ್ಶ್ ವಕಿಲ್  ಅವರೆನ್ನುವಂತೆ ರೂಪಾಯಿ ಮೌಲ್ಯ ಬಲವರ್ಧನೆದುರ್ಬಲ ಅಂತರರಾಷ್ಟ್ರೀಯ  ವಹಿವಾಟಿನ ಸೂಚನೆ  ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನವು 1,497 ಯುಎಸ್ ಡಾಲರ್ ಗೆ ಕುಸಿದಿದೆ.ನ್ಯೂಯಾರ್ಕ್ ನಲ್ಲಿ ಔನ್ಸ್ ಗೆ 17 ಡಾಲರ್ ಆಗಿದ್ದರೆ ಬೆಳ್ಳಿ ಬೆಲೆ ಔನ್ಸ್ ಗೆ 17.54 ಡಾಲರ್ ಆಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಬೆಲೆಗಳು ಶೇಕಡಾ 1 ಕ್ಕಿಂತಲೂ ಹೆಚ್ಚು ಕುಸಿದ ಬಳಿಕ ಮಧ್ಯಾಹ್ನದ ವಹಿವಾಟಿನಲ್ಲಿ ರೂಪಾಯಿ ಬಲವರ್ಧನೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com