ಮನರಂಜನಾ ಕ್ಷೇತರದ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡಲು ನೆಟ್‌ಫಿಕ್ಸ್‌ನಿಂದ 7.5 ಕೋಟಿ ರೂ.ದೇಣಿಗೆ

ಸ್ಟ್ರೀಮಿಂಗ್ ವೇದಿಕೆಯಾದ ನೆಟ್ ಫ್ಲಿಕ್ಸ್ ದೇಶದ ಮನರಂಜನಾ ಉದ್ಯಮದಲ್ಲಿ ದೈನಂದಿನ ವೇತನ ಪಡೆಯುವವರಿಗೆ ಸಹಾಯ ಮಾಡಲು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ (ಪಿಜಿಐ)ದ ಪರಿಹಾರ ನಿಧಿಗೆ 7.5 ಕೋಟಿ ರೂ.ದೇಣಿಗೆ ನೀಡಿದೆ.
ನೆಟ್ ಫ್ಲಿಕ್ಸ್
ನೆಟ್ ಫ್ಲಿಕ್ಸ್
Updated on

ಪುಣೆ: ಸ್ಟ್ರೀಮಿಂಗ್ ವೇದಿಕೆಯಾದ ನೆಟ್ ಫ್ಲಿಕ್ಸ್ ದೇಶದ ಮನರಂಜನಾ ಉದ್ಯಮದಲ್ಲಿ ದೈನಂದಿನ ವೇತನ ಪಡೆಯುವವರಿಗೆ ಸಹಾಯ ಮಾಡಲು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ (ಪಿಜಿಐ)ದ ಪರಿಹಾರ ನಿಧಿಗೆ 7.5 ಕೋಟಿ ರೂ.ದೇಣಿಗೆ ನೀಡಿದೆ.

ಪಿಜಿಐ ಕಳೆದ ತಿಂಗಳು ಈ ನಿಧಿಯನ್ನು ಸ್ಥಾಪಿಸಿತ್ತು. ಕೊರೋನಾ ವೈರಸ್ ನಿಂದ ದೇಶದಲ್ಲಿ ಚಲನಚಿತ್ರ, ಟಿವಿ ಮತ್ತು ವೆಬ್ ನಿರ್ಮಾಣಗಳ ಮುಚ್ಚುವಿಕೆಯಿಂದ ನೇರವಾಗಿ ಪರಿಣಾಮ ಬೀರಿರುವ ಭಾರತೀಯ ಸೃಜನಶೀಲ ಸಮುದಾಯದ ಸಾವಿರಾರು ದಿನಗೂಲಿ ವೇತನ ಪಡೆಯುವವರಿಗೆ ತುರ್ತು ಅಲ್ಪಾವಧಿಯ ಪರಿಹಾರವನ್ನು ನೀಡುವ ಉದ್ದೇಶದಿಂದ ಈ ದೇಣಿಗೆ ನೀಡಲಾಗಿದೆ.

ಟಿವಿ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವ ಎಲೆಕ್ಟ್ರಿಷಿಯನ್ ಗಳಿಂದ ಹಿಡಿದು ಬಡಗಿಗಳು, ಮೇಕಪ್ ಕಲಾವಿದರನ್ನು ಗುರುತಿಸಿ ಬೆಂಬಲಿಸಲು ನಾವು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ನಾವು  ಕೃತಜ್ಞರಾಗಿರುತ್ತೇವೆ. ನೆಟ್ ಫ್ಲಿಕ್ಸ್ ನ ಯಶಸ್ಸಿಗೆ ಭಾರತದಲ್ಲಿನ ಸಿಬ್ಬಂದಿಗಳ ಶ್ರಮವೇ ಕಾರಣ. 

ಈಗ ನಾವು ನಮ್ಮ ಪಾತ್ರವನ್ನು ನಿರ್ವಹಿಸಲು ಮುಂದೆ ಬಂದಿದ್ದೇನೆ. ಈ ಅಭೂತಪೂರ್ವ ಕಾಲದಲ್ಲಿ ಹೆಚ್ಚಿನ ಬೆಂಬಲ  ಅಗತ್ಯವಿರುವವರಿಗೆ ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ನೆಟ್ ಫ್ಲಿಕ್ಸ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ (ಪಿಜಿಐ) ಅಧ್ಯಕ್ಷ ಸಿದ್ಧಾರ್ಥ್ ರಾಯ್ ಕಪೂರ್ ಮಾತನಾಡಿ, ಈ ನಿಧಿಗೆ ನೆಟ್ ಫ್ಲಿಕ್ಸ್ ನೀಡಿದ ಕೊಡುಗೆಯನ್ನು ಗೌರವಿಸುವುದಾಗಿ ತಿಳಿಸಿದರು. ಈ ಕಷ್ಟದ ಸಮಯದಲ್ಲಿ ನಮ್ಮ ಸಹೋದ್ಯೋಗಿಗಳನ್ನು ಬೆಂಬಲಿಸಲು ನಾವು ಸ್ಥಾಪಿಸಿದ ನಿಧಿಗೆ ಕೊಡುಗೆ ನೀಡಿದ ಭ್ರಾತೃತ್ವಕ್ಕೆ ನಾನು ಹೆಮ್ಮೆಪಡುತ್ತೇನೆ ಮತ್ತು ಕೃತಜ್ಞನಾಗಿದ್ದೇನೆ. ಈ ನಿಧಿಗೆ ನೆಟ್ ಫ್ಲಿಕ್ಸ್ ನ ಉದಾರ ಬದ್ಧತೆ ಮತ್ತು ನಮ್ಮ ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡುವ ಅವರ ಸಂಕಲ್ಪವನ್ನು ನಾವು ಗೌರವಿಸುತ್ತೇವೆ ಎಂದು ತಿಳಿಸಿದರು. ಇದರ ಜೊತೆಗೆ, ಭಾರತದಲ್ಲಿ, ನೆಟ್ ಫ್ಲಿಕ್ಸ್ ಭಾರತದಲ್ಲಿನ ಸ್ಟ್ರೀಮರ್ ನ ನಿರ್ಮಾಣಗಳಲ್ಲಿ ಕೆಲಸ ಮಾಡಲು ನಿಗದಿಯಾಗಿದ್ದ ಎಲ್ಲ ಕೆಳಹಂತದ ಸಿಬ್ಬಂದಿ ವರ್ಗಕ್ಕೆ ನಾಲ್ಕು ವಾರಗಳವರೆಗೆ ವೇತನವನ್ನು ನೀಡಲು ಬದ್ಧವಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com