ಕೊರೋನಾ ಎಫೆಕ್ಟ್: 40 ವರ್ಷದಲ್ಲಿ ಮೊದಲ ಬಾರಿಗೆ ದೇಶದ ಜಿಡಿಪಿ ಶೂನ್ಯಕ್ಕೆ?

ಕೊರೋನಾ ವೈರಸ್ ಮಹಾಮಾರಿ ದೇಶದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿದ್ದು ಇದರ ನಡುವೆ ದೇಶದ ಜಿಡಿಪಿ ಸಹ ಋಣಾತ್ಮಕ ಹಾದಿಯಲ್ಲಿ ಸಾಗುತ್ತಿದೆ. 
ಜಿಡಿಪಿ
ಜಿಡಿಪಿ

ನವದೆಹಲಿ: ಕೊರೋನಾ ವೈರಸ್ ಮಹಾಮಾರಿ ದೇಶದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿದ್ದು ಇದರ ನಡುವೆ ದೇಶದ ಜಿಡಿಪಿ ಸಹ ಋಣಾತ್ಮಕ ಹಾದಿಯಲ್ಲಿ ಸಾಗುತ್ತಿದೆ. 

ದೇಶದಲ್ಲಿ ಲಾಕ್ ಡೌನ್ ಅನ್ನು ಮತ್ತೆ 19 ದಿನಗಳ ಕಾಲ ವಿಸ್ತರಿಸಿದ್ದರಿಂದ ಇದು ಆರ್ಥಿಕತೆ ಮೇಲೆ ಗಂಭೀರ ಬೀರಲಿದ್ದು ಜಿಡಿಪಿ ದರ ಕುಸಿಯುವ ಭೀತಿಯನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. 

ಇನ್ನು 2021ರ ಮಾರ್ಚ್ ವೇಳೆಗೆ ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನ(ಜಿಡಿಪಿ) 40 ವರ್ಷಗಳಲ್ಲೇ ಮೊದಲ ಬಾರಿ ಋಣಾತ್ಮಕ ಪ್ರಗತಿ ದಾಖಲಿಸುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

1980ರಲ್ಲಿ ದೇಶದ ಜಿಡಿಪಿ ಕೊನೆಯ ಬಾರಿ ಋಣಾತ್ಮಕ ಬೆಳವಣೆಗೆ ದಾಖಲಿಸಿತ್ತು. ಅಂದು ಜಿಡಿಪಿ ಒಟ್ಟು ಶೇಕಡ 5.2ರಷ್ಟು ಕುಸಿದಿತ್ತು. ಇನ್ನು 2020-21ನೇ ಸಾಲಿನಲ್ಲಿ ಇದು ಶೇ.0.4 ಅಥವಾ ಶೇ.0.1ರಷ್ಟು ಋಣಾತ್ಮಕ ಬೆಳವಣಿಗೆ ದಾಖಲಿಸುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com