ರಿಲಯನ್ಸ್ ಇಂಡಸ್ಟ್ರೀಸ್ 4ನೇ ತ್ರೈಮಾಸಿಕ ವರದಿ; ಲಾಭಾಂಶದಲ್ಲಿ ಶೇ.39ರಷ್ಟು ಕುಸಿತ, 6,346 ಕೋಟಿ ರೂಪಾಯಿ ನಿವ್ವಳ ಲಾಭ

ಮಾರಕ ಕೊರೋನಾ ವೈರಸ್ ಪ್ರಸರಣ ಮತ್ತು ಲಾಕ್ ಡೌನ್ ನಡುವೆಯೇ ದೇಶದ ಖ್ಯಾತ ಉದ್ಯಮ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ನ 4ನೇ ತ್ರೈಮಾಸಿಕ ವರದಿ ಪ್ರಕಟವಾಗಿದ್ದು, ಸಂಸ್ಥೆಯ ಲಾಭಾಂಶದಲ್ಲಿ ಶೇ.39ರಷ್ಟು ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮುಂಬೈ: ಮಾರಕ ಕೊರೋನಾ ವೈರಸ್ ಪ್ರಸರಣ ಮತ್ತು ಲಾಕ್ ಡೌನ್ ನಡುವೆಯೇ ದೇಶದ ಖ್ಯಾತ ಉದ್ಯಮ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ನ 4ನೇ ತ್ರೈಮಾಸಿಕ ವರದಿ ಪ್ರಕಟವಾಗಿದ್ದು, ಸಂಸ್ಥೆಯ ಲಾಭಾಂಶದಲ್ಲಿ ಶೇ.39ರಷ್ಟು ಕುಸಿತ ಕಂಡಿದೆ.

ಹೌದು.. ರಿಲಯನ್ಸ್ ಇಂಡಸ್ಟ್ರಿಯ ನಾಲ್ಕನೇ ತ್ರೈಮಾಸಿಕ ವರದಿಯ ಅಂಕಿ-ಅಂಶಗಳು ಗುರುವಾರ ಪ್ರಕಟವಾಗಿದ್ದು, ಸಂಸ್ಥೆಯು 6,346 ಕೋಟಿ ನಿವ್ವಳ ಲಾಭ ಗಳಿಸಿದೆ. ಆದರೆ ಈ ಲಾಭಾಂಶ ಕಳೆದ ಬಾರಿಗಿಂತ ಶೇ.39ರಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಕಳೆದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಸಂಸ್ಥೆಯ ಲಾಭಾಂಶದಲ್ಲಿ ಶೇ.39ರಷ್ಟು ಅಂದರೆ ಸುಮಾರು 4,267 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಾರಿ ಒಟ್ಟು 10,813 ಕೋಟಿ ಹೊಂದಾಣಿಕ ಲಾಭದ ಕುರಿತು ಲೆಕ್ಕಾಚಾರ ಹಾಕಲಾಗಿತ್ತು. ರಿಲಯನ್ಸ್ ಇಂಡಸ್ಟ್ರಿ ಆಡಳಿತ  ಮಂಡಳಿ ಪ್ರತಿ ಷೇರಿಗೆ 1,275 ದರದಲ್ಲಿ ಹಂಚಿಕೆಗೆ ಅನುಮೋದನೆ ನೀಡಿದೆ. ಇದರಿಂದ 53,000 ಕೋಟಿ ರೂ. ಏರಿಕೆಯಾಗಿದೆ.

ವೇತನ ತ್ಯಾಗ
ಇನ್ನು ಕೊರೋನಾ ಮಹಾಮಾರಿಯಿಂದಾಗಿ ತೀವ್ರ ಬಿಕ್ಕಟ್ಟಿನ ಸ್ಥಿತಿಯಲ್ಲಿ ರಿಲಯನ್ಸ್​ ಇಂಡಸ್ಟ್ರಿಸ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ತಮ್ಮ ಇಡೀ ಸಂಬಳವನ್ನೇ ತ್ಯಾಗ ಮಾಡಿದ್ದಾರೆ. ಜೊತೆಗೆ ಆರ್​ಐಎಲ್​ನ ಕಾರ್ಯನಿರ್ವಾಹಕ ನಿರ್ದೇಶಕರು, ಸದಸ್ಯರು  ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತಮ್ಮ ಸಂಬಳ-ಭತ್ಯೆಯಲ್ಲಿ ಶೇ. 30ರಿಂದ 50ರಷ್ಟು ತ್ಯಾಗ ಮಾಡಿದ್ದಾರೆ. ಮತ್ತು ವಾರ್ಷಿಕ 15 ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುತ್ತಿರುವ ರಿಲಯನ್ಸ್​ನ ಎಲ್ಲ ಉದ್ಯೋಗಿಗಳು ಶೇ. 10ರಷ್ಟು  ಸಂಬಳ ಬಿಟ್ಟುಕೊಡಲಿದ್ದಾರೆ.

ರಿಲಯನ್ಸ್ ಜಿಯೋ ಲಾಭಾಂಶ ಶೇ.177ರಷ್ಟು ಏರಿಕೆ, 2331 ಕೋಟಿ ನಿವ್ವಳ ಲಾಭ
ಇನ್ನು ಲಾಕ್ ಡೌನ್ ಹೊರತಾಗಿಯೂ ರಿಲಯನ್ಸ್ ಜಿಯೋ ಲಾಭಾಂಶ ಶೇ.177ರಷ್ಟು ಏರಿಕೆಯಾಗಿದ್ದು, 2,331 ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 840 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com