ಟೊಯೊಟ ಕಿರ್ಲೋಸ್ಕರ್‍ ನಿಂದ ಜುಲೈನಲ್ಲಿ 5,386 ವಾಹನ ಮಾರಾಟ: ಎಸ್‍ಯುವಿ ವಿಭಾಗ ಪ್ರವೇಶಿಸಲು ಸಜ್ಜು

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ಪ್ರಸಕ್ತ ಹಣಕಾಸು ವರ್ಷದ ಜುಲೈನಲ್ಲಿ ಒಟ್ಟು 5,386 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಶನಿವಾರ ಪ್ರಕಟಿಸಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಸಗಟು ಮಾರಾಟದಲ್ಲಿ ಶೇ 40 ರಷ್ಟು ಪ್ರಗತಿ ದಾಖಲಿಸಿದೆ.
ಟೊಯೋಟ
ಟೊಯೋಟ

ಹೈದರಾಬಾದ್: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ಪ್ರಸಕ್ತ ಹಣಕಾಸು ವರ್ಷದ ಜುಲೈನಲ್ಲಿ ಒಟ್ಟು 5,386 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಶನಿವಾರ ಪ್ರಕಟಿಸಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದರೆ ಸಗಟು ಮಾರಾಟದಲ್ಲಿ ಶೇ 40 ರಷ್ಟು ಪ್ರಗತಿ ದಾಖಲಿಸಿದೆ.

ಅನ್‍ಲಾಕ್‍ ನಂತರದ ಮೊದಲ ತಿಂಗಳಾದ ಜೂನ್‌ನಲ್ಲಿ ಕಂಪನಿ ಒಟ್ಟು 3,866 ವಾಹನಗಳನ್ನು ಮಾರಾಟ ಮಾಡಿತ್ತು. 2019 ರ ಜುಲೈನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಒಟ್ಟು 10,423 ವಾಹನಗಳನ್ನು ಮಾರಾಟ ಮಾಡಿದ್ದರೆ,868 ಇಟಿಯೋಸ್ ವಾಹನಗಳನ್ನು ರಫ್ತು ಮಾಡಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು ಈ ಹಬ್ಬದ ಋತುವಿನಲ್ಲಿ ತನ್ನ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಕ್ರಿಯಾತ್ಮಕ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸುವುದಾಗಿ ಘೋಷಿಸಿದೆ. ಇದಕ್ಕಾಗಿ, ಬೆಂಗಳೂರು ಸಮೀಪದ ಬಿಡದಿಯಲ್ಲಿನ ತನ್ನ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಜುಲೈ ತಿಂಗಳ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಂಪೆನಿಯ ಹಿರಿಯ ಉಪಾಧ್ಯಕ್ಷ (ಮಾರಾಟ ಮತ್ತು ಸೇವೆ) ನವೀನ್ ಸೋನಿ, ‘ವಿವಿಧ ಸವಾಲುಗಳ ಹೊರತಾಗಿಯೂ, ಜೂನ್‌ಗೆ ಹೋಲಿಸಿದರೆ ಜುಲೈ ತಿಂಗಳು ಚಿಲ್ಲರೆ ಮತ್ತು ಸಗಟು ಎರಡರಲ್ಲೂ ಉತ್ತಮ ಮಾರಾಟವಾಗಿದೆ.’ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com