ತಪ್ಪುದಾರಿಗೆಳೆಯುವ ಜಾಹೀರಾತು: ಮುತ್ತುಟ್ಟು ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ದಂಡ ಹಾಕಿದ ಸೆಬಿ

ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ ಹಿನ್ನಲೆಯಲ್ಲಿ ಮುತ್ತುಟ್ಟು ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ಸಂಸ್ಥೆಗೆ ಸೆಬಿ 10 ಲಕ್ಷ ರೂಗಳ ದಂಡ ಹೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ ಹಿನ್ನಲೆಯಲ್ಲಿ ಮುತ್ತುಟ್ಟು ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ಸಂಸ್ಥೆಗೆ ಸೆಬಿ 10 ಲಕ್ಷ ರೂಗಳ ದಂಡ ಹೇರಿದೆ.

ಮುತ್ತುಟ್ಟು ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ಸಂಸ್ಥೆಆರ್ ಬಿಐ ಮತ್ತು ಸೆಬಿ ಹೆಸರುಗಳನ್ನ ಬಳಕೆ ಮಾಡಿಕೊಂಡು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಜಾಹೀರಾತು ಪ್ರಸಾರ ಮಾಡಿತ್ತು. ಈ ಸಂಬಂಧ ಸೆಬಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಮುತ್ತುಟ್ಟು ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ಸಂಸ್ಥೆಗೆ 10 ಲಕ್ಷ ರೂ ದಂಡ ವಿಧಿಸಿದೆ.

ಮುತ್ತುಟ್ಟು ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ಸಂಸ್ಥೆ ತನ್ನ ವೆಬ್ ಸೈಟಿನಲ್ಲಿ ತನ್ನ ಸಂಸ್ಥೆ ಆರ್ ಬಿಐ ಮತ್ತು ಸೆಬಿ ಪ್ರಮಾಣ ಪತ್ರವಿದೆ ಎಂದು ಹೇಳಿಕೊಂಡಿತ್ತು. ಆದರೆ ಈ ಮುತ್ತುಟ್ಟು ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ಸಂಸ್ಥೆ  ಈ ಸಂಬಂಧ ಸೆಬಿಯಿಂದಾಗಲಿ ಅಥವಾ ಆರ್ ಬಿಐ ನಿಂದ ಯಾವುದೇ ರೀತಿಯ ಪ್ರಮಾಣ ಪತ್ರ ಪಡೆದಿರಲಿಲ್ಲ. ಇದನ್ನು ಮನಗಂಡ ಸೆಬಿ ಸಂಸ್ಥೆಗೆ 10 ಲಕ್ಷ ರೂ ದಂಡ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com