ಭಾರತದಲ್ಲಿ ಸ್ಯಾಮ್ ಸಂಗ್ ಸ್ಮಾರ್ಟ್ ವಾಚ್ ಉತ್ಪಾದನೆ ಪ್ರಾರಂಭ

ಟೆಕ್ ದೈತ್ಯ ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿ ಸ್ಮಾರ್ಟ್ ವಾಚ್ ಗಳ ಉತ್ಪಾದನೆ ಪ್ರಾರಂಭಿಸಿರುವುದಾಗಿ ಹೇಳಿದೆ.  ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದ ನೋಯ್ಡಾದಲ್ಲಿ ಸ್ಮಾರ್ಟ್ ವಾಚ್ ಉತ್ಪಾದನೆಯನ್ನು ಪ್ರಾರಂಭಿಸಿರುವುದಾಗಿ ಸಂಸ್ಥೆ ತಿಳಿಸಿದೆ. 
ಭಾರತದಲ್ಲಿ ಸ್ಯಾಮ್ ಸಂಗ್ ಸ್ಮಾರ್ಟ್ ವಾಚ್ ಉತ್ಪಾದನೆ ಪ್ರಾರಂಭ
ಭಾರತದಲ್ಲಿ ಸ್ಯಾಮ್ ಸಂಗ್ ಸ್ಮಾರ್ಟ್ ವಾಚ್ ಉತ್ಪಾದನೆ ಪ್ರಾರಂಭ

ನವದೆಹಲಿ: ಟೆಕ್ ದೈತ್ಯ ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿ ಸ್ಮಾರ್ಟ್ ವಾಚ್ ಗಳ ಉತ್ಪಾದನೆ ಪ್ರಾರಂಭಿಸಿರುವುದಾಗಿ ಹೇಳಿದೆ.  
ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದ ನೋಯ್ಡಾದಲ್ಲಿ ಸ್ಮಾರ್ಟ್ ವಾಚ್ ಉತ್ಪಾದನೆಯನ್ನು ಪ್ರಾರಂಭಿಸಿರುವುದಾಗಿ ಸಂಸ್ಥೆ ತಿಳಿಸಿದೆ. 

ನೋಯ್ಡಾದಲ್ಲಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಉತ್ಪಾದನೆ ಮಾಡುವ ದಕ್ಷಿಣ ಕೊರಿಯಾದ ಸಂಸ್ಥೆ 28,490 ರೂಪಾಯಿಗಳ 4G ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದ್ದು ಸ್ಥಳೀಯವಾಗಿ ಉತ್ಪಾದನೆಯಾಗಲಿವೆ.

ಗ್ಯಾಲೆಕ್ಸಿ ವಾಚ್ ಆಕ್ಟೀವ್2 4G ಯ ಅಲ್ಯುಮಿನಿಯಮ್ ಎಡಿಷನ್ 4G ವಾಚ್ ಗಳ ಪೈಕಿ ಭಾರತದಲ್ಲೇ ತಯಾರಾಗುವ ಅತ್ಯಂತ ಕೈಗೆಟುಕುವ ಬೆಲೆಯ ವಾಚ್ ಆಗಿದೆ ಎಂದು ಸ್ಯಾಮ್ ಸಂಗ್ ಸಂಸ್ಥೆ ತಿಳಿಸಿದೆ.

ಗ್ಯಾಲೆಕ್ಸಿ ವಾಚ್ ಆಕ್ಟೀವ್2 4Gಯೊಂದಿಗೆ ಸಂಪೂರ್ಣ 18 ಸ್ಮಾರ್ಟ್ ವಾಚ್ ಗಳ ರೇಂಜ್ ಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ ಎಂದು ಸ್ಯಾಮ್ ಸಂಗ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com