ಬೆಂಗಳೂರು: ಮಾರಕ ಕೊರೋನಾವೈರಸ್ ಕಾರಣ ಜಗತ್ತಿನಾದ್ಯಂತ ಆರ್ಥಿಕತೆ ಕುಸಿದಿದ್ದು, ಭಾರತದಲ್ಲಿನ ಪರಿಸ್ಥಿತಿ ಭಿನ್ನವಾಗಿಲ್ಲ. ಇಂತಹ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹೆಚ್ಚು ವೆಚ್ಚ ಮಾಡಬೇಕಾದರೂ ಜೀವ ಹಾಗೂ ಉದ್ಯೋಗವನ್ನು ಉಳಿಸುವತ್ತ ದೇಶ ಕೂಡಲೇ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಸಿಐಐ ಅಧ್ಯಕ್ಷ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಉದಯ್ ಕೊಟಕ್ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ 'ಎಕ್ಸ್ ಪ್ರೆಶನ್ಸ್' ನೇರ ವೆಬ್ ಕ್ಯಾಸ್ಟ್ ಸರಣಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮತ್ತು ರಾಜಕೀಯ ಆರ್ಥಿಕ ವಿಶ್ಲೇಷಕ ಶಂಕರ್ ಅಯ್ಯರ್ ಅವರೊಂದಿಗೆ ಉದಯ್ ಕೊಟಕ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸರ್ಕಾರಗಳು ಪ್ರತಿಕ್ರಿಯಿಸಿದ ರೀತಿಗೆ ನೀವು ತೃಪ್ತಿ ಹೊಂದಿದ್ದೀರಾ?
ಮೊದಲನೇಯದಾಗಿ ಸರ್ಕಾರಗಳು ಜೀವ ಮತ್ತು ಬದುಕನ್ನು ರಕ್ಷಿಸಬೇಕಾಗಿದೆ. ಕೊವೀಡ್-19 ಸೋಂಕಿನಿಂದ ಜೀವವನ್ನು ಕಾಪಾಡಬೇಕಾಗಿದೆ. ಇದೇ ಸಂದರ್ಭದಲ್ಲಿ ಜನರ ಬದುಕು ಹಾಳಾಗದಂತೆ ನೋಡಿಕೊಳ್ಳಬೇಕಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವಾಗಲಿ ಅಥವಾ ನಾಗರಿಕರಾಗಲಿ ಜೀವ ಹಾಗೂ ಬದುಕನ್ನು ಕಾಪಾಡಿಕೊಳ್ಳಲು ಏನೆಲ್ಲಾ ಮಾಡಬೇಕೊ ಅದೆಲ್ಲವನ್ನೂ ಮಾಡಬೇಕಾಗಿದೆ. ಹಗ್ಗದ ಮೇಲಿನ ನಡಿಗೆಯಂತಹ ಪರಿಸ್ಥಿತಿ ಇದೆ ಎಂದರು.
ಎರಡನೇಯದಾಗಿ ಜಿಡಿಪಿಯ ಶೇಕಡವಾರಿನಲ್ಲಿ ಆರೋಗ್ಯಕ್ಕಾಗಿ ಕಡಿಮೆ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿದ್ದೇವೆ. ಶೇ. 1.3 ರಷ್ಟು ನಾವು ವೆಚ್ಚ ಮಾಡುತ್ತಿದ್ದೇವೆ. ಅಮೆರಿಕಾ ಶೇ.14, ಜರ್ಮನಿ ಶೇ. 10 ಚೀನಾ ನಮಗಿಂತ ಶೇ. 4 ಪಟ್ಟು, ಹೆಚ್ಚು ವೆಚ್ಚ ಮಾಡುತ್ತಿವೆ. ಆದ್ದರಿಂದ ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕಾಗಿದೆ ಎಂದು ತಿಳಿಸಿದರು.
ಈ ಟ್ರೆಂಡ್ ನ್ನು ಸಾಂಕ್ರಾಮಿಕ ರೋಗ ಬದಲಾಯಿಸಲಿದೆ ಎಂದು ಅನ್ನಿಸುತ್ತಿದೆಯೇ?
ನಾವು ಬಯಸಿದಂತೆ ಸರಿಯಾದ ರೀತಿಯಲ್ಲಿ ನೀತಿಯನ್ನು ರೂಪಿಸಬೇಕಾಗಿದೆ. ಸಾರ್ವಜನಿಕ ಆರೋಗ್ಯದ ಮೇಲೆ ವೆಚ್ಚ ಮಾಡಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಜಾಗತಿಕವಾಗಿ ಶತ್ರು ರಾಷ್ಟ್ರಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ವೆಚ್ಚ ಮಾಡುತ್ತೇವೆ. ಕೊರೋನಾ ಅವರಿಗಿಂತಲೂ ತುಂಬಾ ಅಪಾಯಕಾರಿಯಾಗಿದೆ. ಆದ್ದರಿಂದ ರಕ್ಷಣೆಯಂತೆ ಆರೋಗ್ಯದ ಮೇಲೆ ವೆಚ್ಚ ಮಾಡುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಸಣ್ಣ ಉದ್ಯಮಗಳ ಹಿತಾಸಕ್ತಿ ಪೂರೈಸುವಷ್ಟು ಆರ್ಥಿಕ ವಲಯವು ಪ್ರಬಲವಾಗಿದೆಯೇ?
ಇದು ಸ್ವಲ್ಪ ಸಮಯದವರೆಗೂ ದುರ್ಬಲವಾಗಿತ್ತು. ಇದೀಗ ಕೊರೋನಾ ಮತ್ತೊಂದು ಆಘಾತಕಾರಿಯಾಗಿದೆ. ಒಟ್ಟಾರೆ ಬ್ಯಾಂಕಿಂಗ್ ವಲಯವನ್ನು ತೆಗೆದುಕೊಂಡರೆ ಬ್ಯಾಂಕಿಂಗ್ ವಲಯ 100 ಲಕ್ಷ ಕೋಟಿಯಷ್ಟು ಸಾಲ ನೀಡಿದೆ. ಅದರ ವಿರುದ್ಧವಾಗಿ 11-12 ಲಕ್ಷ ಕೋಟಿಯಷ್ಟು ಬ್ಯಾಂಕಿಂಗ್ ವಲಯದ ಬಂಡವಾಳವಿದೆ. ಬ್ಯಾಂಕಿಂಗ್ ವಲಯದ ಬಂಡವಾಳದ ಬಗ್ಗೆ ಮಹತ್ವದ ಗಮನ ನೀಡಬೇಕಾಗಿದೆ ಎಂದರು.
ಇಂತಹ ಸಂದರ್ಭದಲ್ಲಿ ಹೊಸ ಬಜೆಟ್ ಬರುವ ಸಾಧ್ಯತೆ ಇದೆಯೇ?
ಇಂದು ಕೂಡಾ ಕೊರೋನಾ ವೈರಸ್ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಅಂದಾಜು ಮತ್ತು ಗುರಿಯನ್ನು ಸಾಧಿಸಲು ಯತ್ನಿಸುವುದು ನಡೆಯುತ್ತ ಇರುತ್ತದೆ. ವಿತ್ತಿಯ ಕೊರತೆ ಹೆಚ್ಚಾಗದಂತೆ ನಿರ್ವಹಣೆ ಮಾಡುತ್ತಿರುವುದಾಗಿ ತಿಳಿಸಿದರು.
ಕೊರೋನಾ ವಿರುದ್ಧದ ಹೋರಾಟಕ್ಕೆ ಹೇಗೆ ನಿಧಿ ಸಂಗ್ರಹಿಸುತ್ತೀರಿ?
ಇದರ ಭಾಗವಾಗಿ ಸರ್ಕಾರ ಸಾಲದ ಯೋಜನೆಯನ್ನು ಪ್ರಕಟಿಸಿದೆ. ಕೊರತೆಯ ಹಣ ಗಳಿಕೆ ಮತ್ತೊಂದು ಮೂಲವಾಗಿದೆ. ಕಿರು ಅವದಿಯಲ್ಲಿ ಏನು ಬೇಕಾಗುತ್ತದೆಯೋ ಅದಕ್ಕೆ ವೆಚ್ಚ ಮಾಡಲು ಸಿದ್ಧರಿದ್ದೇವೆ. ಮಧ್ಯಮ ಅವಧಿಯಲ್ಲಿ ಆರೋಗ್ಯ ಮತ್ತು ಶಿಕ್ಷಣದ ಮೇಲೆ ವೆಚ್ಚ ಮಾಡುತ್ತೇವೆ. ಹಣಕಾಸಿನ ಕೊರತೆಯನ್ನು ವಿಸ್ತರಿಸುವುದು ಎಂದು ತಿಳಿದುಕೊಂಡರೆ ನಾವು ಹಣಕಾಸಿನ ಕೊರತೆಯನ್ನು ವಿಸ್ತರಿಸಲು ಸಿದ್ಧರಾಗಿರಬೇಕು.ಆದರೆ ಹಣಕಾಸಿನ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದರು.
Advertisement