ಜಿಯೋ ಮಾರ್ಟ್‌ ಕಿರಾಣಿ ಮಾರಾಟ ಈಗ ಕರ್ನಾಟಕದ ಸಣ್ಣ ಪಟ್ಟಣಗಳಿಗೂ ವಿಸ್ತರಣೆ!

ಜಿಯೋ ಮಾರ್ಟ್ ಈಗ ದೇಶಾದ್ಯಂತ ಸುಮಾರು 200 ನಗರಗಳಲ್ಲಿ ವಿತರಣೆಯನ್ನು ಆರಂಭಿಸಿದ್ದು ಮತ್ತು ಹಲವಾರು ಹೊಸ ಪಟ್ಟಣಗಳನ್ನು ತಲುಪುವ ಮೂಲಕ ಅಗತ್ಯ ವಸ್ತುಗಳ ಆನ್‌ಲೈನ್‌ ಆಧುನಿಕ ಚಿಲ್ಲರೆ ವ್ಯಾಪಾರದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಈಗಾಗಲೇ ಕರ್ನಾಟಕದ ಸಣ್ಣ ಪಟ್ಟಣಗಳಿಗೂ ಸೇವೆಯನ್ನು ವಿಸ್ತರಿಸಿದೆ.
ಜಿಯೋ ಮಾರ್ಟ್
ಜಿಯೋ ಮಾರ್ಟ್

ಮುಂಬೈ: ಜಿಯೋ ಮಾರ್ಟ್ ಈಗ ದೇಶಾದ್ಯಂತ ಸುಮಾರು 200 ನಗರಗಳಲ್ಲಿ ವಿತರಣೆಯನ್ನು ಆರಂಭಿಸಿದ್ದು ಮತ್ತು ಹಲವಾರು ಹೊಸ ಪಟ್ಟಣಗಳನ್ನು ತಲುಪುವ ಮೂಲಕ ಅಗತ್ಯ ವಸ್ತುಗಳ ಆನ್‌ಲೈನ್‌ ಆಧುನಿಕ ಚಿಲ್ಲರೆ ವ್ಯಾಪಾರದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಈಗಾಗಲೇ ಕರ್ನಾಟಕದ ಸಣ್ಣ ಪಟ್ಟಣಗಳಿಗೂ ಸೇವೆಯನ್ನು ವಿಸ್ತರಿಸಿದೆ.

ಜಿಯೋಮಾರ್ಟ್ ಆಧುನಿಕ ಮತ್ತು ಆನ್‌ಲೈನ್ ಚಿಲ್ಲರೆ ಅನುಭವವನ್ನು ಹೊಂದಿರದ ಅನೇಕ ಭಾರತೀಯರಿಗೆ ಮತ್ತು ಪಟ್ಟಣಗಳಿಗೆ ಸೇವೆಯನ್ನು ವಿಸ್ತರಿಸುತ್ತಿದೆ. ಜನರು ತಮ್ಮ ದೈನಂದಿನ ಅಗತ್ಯಗಳಿಗಾಗಿ ಕಡಿಮೆ ಬೆಲೆಗೆ ಮತ್ತು ಅತೀ ವೇಗವಾಗಿ ಡೆಲಿವರಿ ನೀಡುವ ಜಿಯೋಮಾರ್ಟ್ ಸೇವೆಯನ್ನು ಬಳಕೆ ಮಾಡುವಂತೆ ಯೋಜನೆಯನ್ನು ರೂಪಿಸುತ್ತಿದೆ. ಕೋವಿಡ್ -19 ನಂತರದಲ್ಲಿ ಜಿಯೋ ಮಾರ್ಟ್‌ ಸೇವೆಯೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿನ ನಗರಗಳಲ್ಲಿ ದೊರೆಯಲಿದೆ.

ಜಿಯೋ ಮಾರ್ಟ್‌ ಹೊಸ ಪಟ್ಟಣಗಳು ಮತ್ತು ಹೊಸ ನಗರಗಳಲ್ಲಿ ಹೆಚ್ಚಿನ ಅಗತ್ಯತೆಗಳನ್ನು ಪೂರೈಸಲು ವೇಗವಾಗಿ ವಿತರಣೆ ಮತ್ತು ಗ್ರಾಹಕರಿಗೆ ಉತ್ತಮ ಬೆಲೆಗಳನ್ನು ಒದಗಿಸುತ್ತದೆ. ಜಿಯೋಮಾರ್ಟ್‌ನಿಂದಾಗೊ ಕೆಲವು ಸಣ್ಣ / ಅರೆ-ನಗರ ಮತ್ತು ಪಟ್ಟಣಗಳು ಮೊದಲ ಬಾರಿಗೆ ವಿಶೇಷ "ಅಗತ್ಯ ಮೀಸಲಾದ ಇ-ಕಾಮರ್ಸ್" ಸೇವೆಯನ್ನು ಪಡೆಯುವಂತಾಗಲಿದೆ.

ಈಗ ಹಲವಾರು ಪಟ್ಟಣಗಳಲ್ಲಿ ಜಿಯೋಮಾರ್ಟ್ ವಿತರಣೆಯನ್ನು ಆರಂಭಿಸಿದೆ. ಇವುಗಳಲ್ಲಿ ಕರ್ನಾಟಕದ ಉಡುಪಿ ಮತ್ತು ಗೋಕಾಕ್, ಪಂಜಾಬ್‌ನ ಕಪುರ್ಥಾಲಾ, ಮಧ್ಯಪ್ರದೇಶದ ಗುನಾ ಮತ್ತು ಸಾಗರ್, ರಾಜಸ್ಥಾನದ ನೋಖಾ ಮತ್ತು ಭಿವಾಡಿ, ಜುನಗರ್ ಮತ್ತು ಗುಜರಾತ್‌ನ ಹಿಮಾತ್‌ನಗರ, ಹರಿಯಾಣದ ಪಾಲ್ವಾಲ್ ಪಟ್ಟಣಗಳು ಸೇರಿಕೊಂಡಿವೆ.

ಜಿಯೋ ಮಾರ್ಟ್‌ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಡೆಲಿವರಿಯನ್ನು ಮಾಡುತ್ತಿದೆ. ಹಾಗಾಗಿ ಬೇರೆಯವರಿಗೆ ಹೋಲಿಸಿಕೊಂಡರೆ ಜಿಯೋ ಮಾರ್ಟ್‌ ಕನಿಷ್ಠ ವಿತರಣಾ ಸಮಯವನ್ನು ಹೊಂದಿದೆ. ಜಿಯೋಮಾರ್ಟ್ ಎರಡು ದಿನಗಳಲ್ಲಿ ಡೆಲಿವರಿ ಭರವಸೆ ನೀಡುತ್ತಿದೆ ಆದರೆ ಹೆಚ್ಚಿನ ಆರ್ಡರ್‌ಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತಲುಪಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com