ಗಗನಕ್ಕೇರಿದ ಆಲೂಗಡ್ಡೆ ಬೆಲೆ!

ಅಗತ್ಯ ಆಹಾರ ವಸ್ತುಗಳ ಸರಾಸರಿ ಚಿಲ್ಲರೆ ಬೆಲೆ ಕಳೆದ ಒಂದು ವರ್ಷದಲ್ಲಿ ಗಣನೀಯ ಏರಿಕೆಯಾಗಿದೆ. ಇದರಂತೆ ಈ ಬಾರಿ ಈರುಳ್ಳಿಗಿಂತಲೂ ಆಲೂಗಡ್ಡೆಯ ಬೆಲೆ ಅತೀಹೆಚ್ಚು ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಗತ್ಯ ಆಹಾರ ವಸ್ತುಗಳ ಸರಾಸರಿ ಚಿಲ್ಲರೆ ಬೆಲೆ ಕಳೆದ ಒಂದು ವರ್ಷದಲ್ಲಿ ಗಣನೀಯ ಏರಿಕೆಯಾಗಿದೆ. ಇದರಂತೆ ಈ ಬಾರಿ ಈರುಳ್ಳಿಗಿಂತಲೂ ಆಲೂಗಡ್ಡೆಯ ಬೆಲೆ ಅತೀಹೆಚ್ಚು ಏರಿಕೆಯಾಗಿದೆ. 

ಆಲೂಗಡ್ಡೆಯ ಬೆಳೆ ಒಂದು ವರ್ಷದಲ್ಲಿ ಶೇ.92ರಷ್ಟು ಏರಿಕೆಯಾಗಿದ್ದು, ಶೇ.44ರಷ್ಟು ಬೆಲೆ ಏರಿಕೆಯಾಗಿರುವ ಈರುಳ್ಳಿ ಎರಡನೇ ಸ್ಥಾನದಲ್ಲಿದೆ. 

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಆಲೂಗೆಡ್ಡೆ ಬೆಲೆ ಪ್ರತಿ ಕೆಜಿಗೆ ರೂ.55 - 65ರವರೆಗೆ ತಲುಪಿದೆ, ಕಳೆದ ಎರಡು ವರ್ಷಗಳಲ್ಲಿ ಆಲೂಗಡ್ಡೆಯ ಬೆಲೆ ರೂ. 50ಕ್ಕಿಂತ ಹೆಚ್ಚಾಗಿರುವುದು ಇದೇ ಮೊದಲು ಎಂದು  ಹಾಪ್'ಕಾಮ್ಸ್'ನ ಅಧಿಕಾರಿಗಳು ಹೇಳಿದ್ದಾರೆ. 

ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ಆಲೂಗಡ್ಡೆಯನ್ನು ರೂ.55ರಿಂದ 60ಗಳವರೆಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತಿ ಕೆಜಿ ಕ್ಯಾರೆಟ್ ಬೆಲೆ ರೂ.100ಕ್ಕೆ ತಲುಪಿದೆ. ಕೊರೋನಾ ಸಾಂಕ್ರಾಮಿಕ ಲಾಕ್ಡೊನ್ ಬಳಿಕ ಮೈಸೂರಿನಲ್ಲಿ ಇದೇ ದರ ಮುಂದುವರೆದಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com