ಜಿಯೋ ಜೊತೆ ಕೈ ಜೋಡಿಸಿದ ಫೇಸ್ ಬುಕ್: ಪುಟಿದೆದ್ದ ಷೇರುಮಾರುಕಟ್ಟೆ

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ರಿಲಾಯನ್ಸ್ ಇಂಡಸ್ಟ್ರೀಸ್ ಜೊತೆ ಕೈ ಜೋಡಿಸಿದ ಬೆಳವಣಿಗೆ ಬೆನ್ನಲ್ಲೇ ಷೇರುಮಾರುಕಟ್ಟೆ ಪುಟಿದೆದ್ದಿದೆ. 

ಷೇರುಮಾರುಕಟ್ಟೆಯಲ್ಲಿ 743 ಅಂಕಗಳ ಏರಿಕೆ ಕಂಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಸೂಚನೆಗಳು ಹಾಗೂ ಬ್ರೆಂಟ್ ಕಚ್ಚಾ ತೈಲ ದರ ಎರಡು ದಶಕಗಳಲ್ಲೇ ಅತಿ ಹೆಚ್ಚು ಕುಸಿತ ಕಂಡ ಪರಿಣಾಮ ಷೇರುಮಾರುಕಟ್ಟೆ ಏರಿಕೆ ಕಂಡಿದೆ ಎಂದು ವಹಿವಾಟುದಾರರು ಹೇಳಿದ್ದಾರೆ. 

ಬಿಎಸ್ಇ ಸೂಚ್ಯಂಕ 31,379.55 ಅಂಶಗಳಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿದ್ದರೆ, ಎನ್ ಎಸ್ ಇ ನಿಫ್ಟಿ 9,187.30. ರಲ್ಲಿ ಅಂತ್ಯಗೊಂಡಿದ್ದು ಸೆನ್ಸೆಕ್ಸ್ ನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಟಾಪ್ ಪರ್ಫಾರ್ಮರ್ ಆಗಿ ಹೊರಹೊಮ್ಮಿತ್ತು. ಫೇಸ್ ಬುಕ್ ಜಿಯೊ ಜೊತೆ ಕೈಜೋಡಿಸಿ 5.7 ಶತಕೋಟಿ ಡಾಲರ್ (43 ಸಾವಿರದ 574 ಕೋಟಿ ರೂಪಾಯಿ)ಗಳಷ್ಟು ಹೂಡಿಕೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com