ಡುರೊಫ್ಲೆಕ್ಸ್ ನಿಂದ ಭಾರತದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕ ಸೋಂಕು ನಿರೋಧಕ ಮ್ಯಾಟ್ರೆಸ್ ಪ್ರೊಟೆಕ್ಟರ್ ಬಿಡುಗಡೆ

ಸೇಫ್ ಮ್ಯಾಟ್ರೆಸ್ ಪ್ರೊಟೆಕ್ಟರ್, ಸ್ವಿಸ್ ತಂತ್ರಜ್ಞಾನದಿಂದ ನಡೆಸಲ್ಪಡುವ ಭಾರತದ ಮೊದಲ  ಆಂಟಿವೈರಲ್ ಮ್ಯಾಟ್ರೆಸ್ ಪ್ರೊಟೆಕ್ಟರ್ ಅನ್ನು ಅಭಿವೃದ್ಧಿಪಡಿಸಿದೆ. 
ಡುರೊಫ್ಲೆಕ್ಸ್ ನಿಂದ ಭಾರತದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕ ಸೋಂಕು ನಿರೋಧಕ ಮ್ಯಾಟ್ರೆಸ್ ಪ್ರೊಟೆಕ್ಟರ್ ಬಿಡುಗಡೆ
ಡುರೊಫ್ಲೆಕ್ಸ್ ನಿಂದ ಭಾರತದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕ ಸೋಂಕು ನಿರೋಧಕ ಮ್ಯಾಟ್ರೆಸ್ ಪ್ರೊಟೆಕ್ಟರ್ ಬಿಡುಗಡೆ

ಬೆಂಗಳೂರು: ಡುರೊ ಸೇಫ್ ಮ್ಯಾಟ್ರೆಸ್ ಪ್ರೊಟೆಕ್ಟರ್, ಸ್ವಿಸ್ ತಂತ್ರಜ್ಞಾನದಿಂದ ನಡೆಸಲ್ಪಡುವ ಭಾರತದ ಮೊದಲ ಆಂಟಿವೈರಲ್ ಮ್ಯಾಟ್ರೆಸ್ ಪ್ರೊಟೆಕ್ಟರ್ ಅನ್ನು ಅಭಿವೃದ್ಧಿಪಡಿಸಿದೆ. 

ಶೇಕಡಾ 99.99 ಸೋಂಕು ಮತ್ತು  ಬ್ಯಾಕ್ಟೀರಿಯಾಗಳನ್ನು ನಿಮಿಷಗಳಲ್ಲಿ ಕೊಲ್ಲಬಲ್ಲ ಹೈ-ಕ್ಯೂ ವೈರೋ ಬ್ಲಾಕ್  ತಂತ್ರಜ್ಞಾನವನ್ನು ಬಳಸಿ ಇದನ್ನು ನಿರ್ಮಿಸಲಾಗಿದೆ ಎಂದು ಡುರೊಫ್ಲೆಕ್ಸ್  ಅಧ್ಯಕ್ಷ ಮೋಹನ್‌ರಾಜ್ ಜೆ. ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುವಾಗ ಆರೋಗ್ಯ ಮತ್ತು ಸುರಕ್ಷತೆ ನಮ್ಮ ಆದ್ಯತೆಗಳಾಗಿವೆ. ನಾವು ಹೊರಗೆ ಹೆಜ್ಜೆ ಹಾಕಿದಾಗಲೆಲ್ಲಾ ಮಾಸ್ಕ್‌ಗಳು ಮತ್ತು ಸ್ಯಾನಿಟೈಜರ್‌ಗಳಂತಹ ಹೊಸ ಸುರಕ್ಷತಾ ಸಂಕೇತಗಳು ರೂಢಿಗಳಾಗಿವೆ. ಮನೆಯಲ್ಲಿ ಹೆಚ್ಚು ಹೆಚ್ಚು ಸಮಯವನ್ನು ಕಳೆಯುತ್ತಿದ್ದಂತೆ, ನಮ್ಮನ್ನು ಮನೆಯಲ್ಲಿ ಸುರಕ್ಷಿತವಾಗಿಡುವುದು ಯಾವುದು?  ಶೇಕಡಾ 100 ಭಾರತೀಯ ಸ್ವದೇಶಿ ನಿರ್ಮಿತ ಬ್ರಾಂಡ್ ಮತ್ತು ರಾಷ್ಟ್ರದ ಅತ್ಯಂತ ವಿಶ್ವಾಸಾರ್ಹ ನಿದ್ರಾಪರಿಹಾರಗಳನ್ನು ಒದಗಿಸುವವರಾಗಿ, ಡುರೊಫ್ಲೆಕ್ಸ್ ಪ್ರತಿಯೊಂದು ಭಾರತೀಯ ಮನೆಯನ್ನು ಸುರಕ್ಷಿತವಾಗಿಸುವಂತಹ ಪರಿಹಾರವನ್ನು ರಚಿಸಲು ಬಯಸಿದೆ ಎಂದು ಅವರು ತಿಳಿಸಿದರು.

ಡುರೊಫ್ಲೆಕ್ಸ್ ಯಾವಾಗಲೂ ನಿದ್ರೆಯ ಮತ್ತು ಆರಾಮದ ಅರ್ಥವನ್ನು ಪುನರ್ ವ್ಯಾಖ್ಯಾನಿಸಿರುವ ಸಂಶೋಧನಾ-ಬೆಂಬಲಿತ ಉತ್ಪನ್ನಗಳನ್ನು ರಚಿಸುವ ಮೂಲಕ ನಾವೀನ್ಯತೆಯ ಮಿತಿಗಳನ್ನು ವಿಸ್ತರಿಸಿದೆ. 

ಸುಧಾರಿತ ಡುರೊ ಸೇಫ್ ಮ್ಯಾಟ್ರೆಸ್ ಪ್ರೊಟೆಕ್ಟರ್ ಬ್ರಾಂಡ್‌ನ ಹೊಸ ಆವಿಷ್ಕಾರವಾಗಿದೆ. ಇದು ಕೃತಕ ಬುದ್ಧಿಮತ್ತೆಯ ಜವಳಿ ತಂತ್ರಜ್ಞಾನಚಾಲಿತವಾಗಿದ್ದು, ಹೈ-ಕ್ಯೂ ವಿರೋಬ್ಲಾಕ್ ಇದು ಆರಾಮ ಮತ್ತು ಸುರಕ್ಷತೆಗಳ ಮೇಲೆ ಕೇಂದ್ರೀಕೃತವಾಗಿದೆ. ಸಂಪರ್ಕಗಳಲ್ಲಿನ ವೈರಸ್‌ಗಳನ್ನು ತಟಸ್ಥಗೊಳಿಸಲು ಹೈ-ಕ್ಯೂ ವೈರೋ ಬ್ಲಾಕ್ ತಂತ್ರಜ್ಞಾನವು ಬೆಳ್ಳಿ ಅಯಾನುಗಳು ಮತ್ತು ಕೋಶಕಗಳನ್ನು ಬಳಸುತ್ತದೆ. 94 ಕ್ಕೂ ಹೆಚ್ಚು ವೈರಸ್‌ಗಳ ಮೇಲೆ ಇದನ್ನು ಪರೀಕ್ಷಿಸಲಾಗಿದ್ದು ಅವುಗಳನ್ನು ನಿಮಿಷಗಳಲ್ಲಿ ನಿಷ್ಕಿಯಗೊಳಿಸುವುದು ಕಂಡುಬಂದಿದೆ. ಹೆಚ್ಚುವರಿಯಾಗಿ, ಈ ರಕ್ಷಕವು  ಶೇಕಡಾ100ರಷ್ಟು ಜಲನಿರೋಧಕ, ಧೂಳು ನಿರೋಧಕ, ಹೈಪೋಲಾರ್‌ಜೆನಿಕ್ ಮತ್ತು ಚರ್ಮಕ್ಕೆ ಸುರಕ್ಷಿತವಾಗಿದ್ದು, ಎಲ್ಲಾ ಭಾರತೀಯ ಮನೆಗಳನ್ನು ಕ್ಷೇಮ ಮತ್ತು ಸುರಕ್ಷಿತವಾಗಿಡಲು ಸಂಪೂರ್ಣ ನೈರ್ಮಲ್ಯ ಪರಿಹಾರವನ್ನಾಗಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com