ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರು ಮಾರುಕಟ್ಟೆ, 42 ಸಾವಿರಕ್ಕೆ ತಲುಪಿದ ಸೆನ್ಸೆಕ್ಸ್ 

ಗುರುವಾರ ಬೆಳಗ್ಗೆ ಷೇರು ಮಾರುಕಟ್ಟೆ ಸೂಚ್ಯಂಕ ಭಾರೀ ಏರಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದರ 42 ಸಾವಿರಕ್ಕೆ ಏರಿಕೆಯಾಗಿದ್ದು ನಿಫ್ಟಿಯಲ್ಲಿ ಸಹ ಭಾರೀ ಏರಿಕೆ ಕಂಡುಬಂದಿದ್ದು ಅಮೆರಿಕಾ ಮತ್ತು ಚೀನಾ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮವಿದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರು ಮಾರುಕಟ್ಟೆ, 42 ಸಾವಿರಕ್ಕೆ ತಲುಪಿದ ಸೆನ್ಸೆಕ್ಸ್ 

ಮುಂಬೈ: ಗುರುವಾರ ಬೆಳಗ್ಗೆ ಷೇರು ಮಾರುಕಟ್ಟೆ ಸೂಚ್ಯಂಕ ಭಾರೀ ಏರಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದರ 42 ಸಾವಿರಕ್ಕೆ ಏರಿಕೆಯಾಗಿದ್ದು ನಿಫ್ಟಿಯಲ್ಲಿ ಸಹ ಭಾರೀ ಏರಿಕೆ ಕಂಡುಬಂದಿದ್ದು ಅಮೆರಿಕಾ ಮತ್ತು ಚೀನಾ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮವಿದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.


ಇಂದು ಬೆಳಗ್ಗೆ ವಹಿವಾಟು ಆರಂಭಕ್ಕೆ 43 ಸಾವಿರಕ್ಕೆ ಏರಿಕೆ ಕಂಡ ಮುಂಬೈ ಷೇರುಪೇಟೆ ಸೂಚ್ಯಂಕ ಇತ್ತೀಚಿನ ವರದಿ ಬಂದಾಗ 67 ಅಂಕ ಏರಿಕೆ ಕಂಡುಬಂದು 41 ಸಾವಿರದ 939 ರಲ್ಲಿ ವಹಿವಾಟು ನಡೆಸುತ್ತಿತ್ತು.


ನಿಫ್ಟಿ ಸಹ 12 ಸಾವಿರದ 378ರಷ್ಟು ಏರಿಕೆ ಕಂಡುಬಂದು ಇತ್ತೀಚಿನ ವರದಿಯಂತೆ 11 ಅಂಕ ಹೆಚ್ಚಳವಾಗಿ 12 ಸಾವಿರದ 354 ರಲ್ಲಿ ವಹಿವಾಟು ನಡೆಸುತ್ತಿತ್ತು. 


ಇಂದಿನ ಷೇರುಪೇಟೆ ವಹಿವಾಟಿನಲ್ಲಿ ಸನ್ ಫಾರ್ಮದ ಷೇರುಗಳು ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದು ಶೇಕಡಾ 1.30ರಷ್ಟು ಏರಿಕೆಯಾಗಿ ನಂತರದ ಸ್ಥಾನಗಳಲ್ಲಿ ನೆಸ್ಲೆ ಇಂಡಿಯಾ, ಹೆಚ್ ಯುಎಲ್, ಕೊಟಾಕ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಆಟೋ ಮತ್ತು ಭಾರ್ತಿ ಏರ್ ಟೆಲ್ ಗಳಾಗಿವೆ.


ಇನ್ನೊಂದೆಡೆ ಇಂಡಸ್ ಬ್ಯಾಂಕ್, ಟಾಟಾ ಸ್ಟೀಲ್, ಎನ್ ಟಿಪಿಸಿ, ಟೈಟಾನ್, ಮಹೀಂದ್ರಾ ಅಂಡ್ ಮಹೀಂದ್ರಾ, ಟೆಕ್ ಮಹೀಂದ್ರಾ, ಒಎನ್ ಜಿಸಿ ಮತ್ತು ಏಷಿಯನ್ ಪೈಂಟ್ಸ್ ಇಳಿಕೆ ಕಂಡುಬಂದಿವೆ.


ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇಕಡಾ 0.61ರಷ್ಟು ಹೆಚ್ಚಳವಾಗಿ ಪ್ರತಿ ಬ್ಯಾರಲ್ ಗೆ 64.39 ಅಮೆರಿಕನ್ ಡಾಲರ್ ಆಗಿದೆ. ಭಾರತದ ರೂಪಾಯಿ ಮೌಲ್ಯ 5 ಪೈಸೆ ಏರಿಕೆಯಾಗಿ ಡಾಲರ್ ಎದುರು ರೂಪಾಯಿ ಮೌಲ್ಯ 70 ರೂಪಾಯಿ 77 ಪೈಸೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com