ಹಣ ದುರುಪಯೋಗ ಆರೋಪ: ಜಿವಿಕೆ ಗ್ರೂಪ್ ಅಧ್ಯಕ್ಷ, ಪುತ್ರ ಜಿವಿಎಸ್ ರೆಡ್ಡಿ ವಿರುದ್ಧ ಸಿಬಿಐ ದೂರು ದಾಖಲು

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಸುಮಾರು 705 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಜಿವಿಕೆ ಗ್ರೂಪ್ ಆಫ್ ಕಂಪೆನಿಸ್ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣಪತಿ ಮತ್ತು ಅವರ ಪುತ್ರ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿ ವಿ ಸಂಜಯ್ ರೆಡ್ಡಿ ಅವರ ವಿರುದ್ಧ ಸಿಬಿಐ ಕೇಸು ದಾಖಲಿಸಿದೆ.
ಜಿವಿಕೆ ಗ್ರೂಪ್ ಅಧ್ಯಕ್ಷ ಮತ್ತು ಪುತ್ರ ಜಿವಿಎಸ್ ರೆಡ್ಡಿ
ಜಿವಿಕೆ ಗ್ರೂಪ್ ಅಧ್ಯಕ್ಷ ಮತ್ತು ಪುತ್ರ ಜಿವಿಎಸ್ ರೆಡ್ಡಿ

ನವದೆಹಲಿ; ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಸುಮಾರು 705 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಜಿವಿಕೆ ಗ್ರೂಪ್ ಆಫ್ ಕಂಪೆನಿಸ್ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣಪತಿ ಮತ್ತು ಅವರ ಪುತ್ರ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿ ವಿ ಸಂಜಯ್ ರೆಡ್ಡಿ ಅವರ ವಿರುದ್ಧ ಸಿಬಿಐ ಕೇಸು ದಾಖಲಿಸಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಜಿವಿಕೆ ಏರ್ ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಹಯೋಗದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮುಂಬೈ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ವಹಣೆ ಮಾಡುವ ಕೆಲಸವನ್ನು ಜಿವಿಕೆ ಗ್ರೂಪ್ ಗೆ ನೀಡಿತ್ತು. ಈ ಒಪ್ಪಂದ 2006ರ ಏಪ್ರಿಲ್ 4ರಂದು ಆಗಿತ್ತು.

ಜಿವಿಕೆ ಗ್ರೂಪ್ ಪ್ರವರ್ತಕರು ತಮ್ಮ ಕಾರ್ಯನಿರ್ವಾಹಕ ಸಿಬ್ಬಂದಿ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಗುರುತು ಪತ್ತೆಯಾಗದ ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

2017-18ರಲ್ಲಿ 9 ಕಂಪನಿಗಳಿಗೆ ನಕಲಿ ಕೆಲಸದ ಒಪ್ಪಂದಗಳನ್ನು ಮಾಡುವ ಮೂಲಕ ಕೆಲಸ ಮಾಡಿರುವುದಾಗಿ ತೋರಿಸಿ 310 ಕೋಟಿ ರೂಪಾಯಿಗಳನ್ನು ಜಿವಿಕೆ ಸಮೂಹದ ಪ್ರವರ್ತಕರು ತಮ್ಮ ಇಚ್ಛೆಯ ಕಂಪೆನಿಗಳಿಗೆ ಹಣ ಒದಗಿಸಿದ್ದಾರೆ. ಈ ಮೂಲಕ 395 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಜಿವಿಕೆ ಗ್ರೂಪ್ ಅಧ್ಯಕ್ಷರು ಮಾತ್ರವಲ್ಲದೆ ಅವರ ಪುತ್ರ ಜಿವಿ ಸಂಜಯ್ ರೆಡ್ಡಿ, 9 ಇತರ ಖಾಸಗಿ ಕಂಪೆನಿಗಳು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಗುರುತು ಪತ್ತೆಯಾಗದ ಅಧಿಕಾರಿಗಳ ವಿರುದ್ಧ ಸಹ ಸಿಬಿಐ ದೂರು ದಾಖಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com