ಗಗನಕ್ಕೇರುತ್ತಿದೆ ಇಂಧನ ಬೆಲೆ: ಸತತ 12ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ಸತತ 12ನೇ ದಿನವೂ ತೈಲ ಬೆಲೆ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ oj 0.54 ಪೈಸೆ ಹಾಗೂ ಡೀಸೆಲ್ ದರ 0.61 ಪೈಲೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸತತ 12ನೇ ದಿನವೂ ತೈಲ ಬೆಲೆ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ oj 0.54 ಪೈಸೆ ಹಾಗೂ ಡೀಸೆಲ್ ದರ 0.61 ಪೈಲೆ ಏರಿಕೆಯಾಗಿದೆ. 

ಇದರೊಂದಿಗೆ ಇಂದಿನ ಪೆಟ್ರೋಲ್ ದರ ಲೀಟರ್'ಗೆ ರೂ.80.33 ಹಾಗೂ ಡೀಸೆಲ್ ದರ ಲೀಟರ್'ಗೆ ರೂ.72.68ಕ್ಕೆ ತಲುಪಿದೆ. 

ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 53 ಪೈಸೆ ಏರಿಕೆಯಾಗಿ ಲೀಟರ್ ಪೆಟ್ರೋಲ್ ದರ ರೂ.77.81 ಹಾಗೂ ಡೀಸೆಲ್ ದರ 64 ಪೈಸೆ ಏರಿಕೆಯಾಗಿ ಲೀಟರ್ ಡೀಸೆಲ್ ದರ ರೂ.76.43ಕ್ಕೆ ತಲುಪಿದೆ. 

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಂಪನಿಗಳು ಈ ಹೆಚ್ಚಳ ಮಾಡುತ್ತಿವೆ. ಇದು ಮತ್ತೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com