ಹಣಕಾಸು ಸಚಿವರ ಪರಿಹಾರ ಪ್ಯಾಕೇಜ್ ಹಿನ್ನೆಲೆ: 1410 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್

ಕೊರೋನಾ ವೈರಸ್ ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ತಡೆಯಲು ಹಣಕಾಸು ಸಚಿವರು ಪರಿಹಾರ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ 1410.99 ಅಂಕಗಳ ಏರಿಕೆ ಕಂಡಿದ್ದು, ದಿನದ ಅಂತ್ಯಕ್ಕೆ 29,946.77 ರಷ್ಟಿತ್ತು. ನಿಫ್ಟಿ ಕೂಡ 323.60 ಅಂಕಗಳಷ್ಟು ಹೆಚ್ಚಳ ಕಂಡು 8,641.45ರಷ್ಟಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಕೊರೋನಾ ವೈರಸ್ ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ತಡೆಯಲು ಹಣಕಾಸು ಸಚಿವರು ಪರಿಹಾರ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ 1410.99 ಅಂಕಗಳ ಏರಿಕೆ ಕಂಡಿದ್ದು, ದಿನದ ಅಂತ್ಯಕ್ಕೆ 29,946.77 ರಷ್ಟಿತ್ತು. ನಿಫ್ಟಿ ಕೂಡ 323.60 ಅಂಕಗಳಷ್ಟು ಹೆಚ್ಚಳ ಕಂಡು 8,641.45ರಷ್ಟಿತ್ತು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಲಾಕ್ ಡೌನ್ ಸಮಯದಲ್ಲಿ ಬಡವರು, ರೈತರು, ಮತ್ತಿತರರಿಗೆ ಸಮಸ್ಯೆಯಾಗದಂತೆ 1.7 ಕೋಟಿ ರೂ. ಪರಿಹಾರ ಘೋಷಿಸಿದ್ದರಿಂದ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ. ದಿನದ ಆರಂಭದಲ್ಲಿ ಸೆನ್ಸೆಕ್ಸ್ 538 ಅಂಕಗಳು ಏರಿಕೆ ಕಂಡು 29,073 ರಷ್ಟಿತ್ತು. ನಂತರ ಅದು 1564 ಅಂಕಗಳ ಏರಿಕೆಯಾಯಿತು.

ಮೂರು ವರ್ಷಗಳ ಹಿಂದೆ ಅಂದರೆ 2017ರ ಮೇ ತಿಂಗಳಲ್ಲಿ ಸೆನ್ಸೆಕ್ಸ್ 29,807ಕ್ಕೆ ತಲುಪಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com