ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಪೇಟಿಎಂ ಸಾಥ್, ಪ್ರಧಾನಿ ನಿಧಿಗೆ 500 ಕೋಟಿ ರೂ ದೇಣಿಗೆ!

ಮಾರಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೈ ಜೋಡಿಸಿದ್ದು, ಪ್ರಧಾನಿ ಮಂತ್ರಿಗಳ ನಿಧಿಗೆ 500 ಕೋಟಿ ರೂಗಳ ದೇಣಿಗೆ ನೀಡುವುದಾಗಿ ಹೇಳಿಕೆ ನೀಡಿದೆ.
ಪೇಟಿಎಂ (ಸಂಗ್ರಹ ಚಿತ್ರ)
ಪೇಟಿಎಂ (ಸಂಗ್ರಹ ಚಿತ್ರ)

ನವದೆಹಲಿ: ಮಾರಕ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಕೈ ಜೋಡಿಸಿದ್ದು, ಪ್ರಧಾನಿ ಮಂತ್ರಿಗಳ ನಿಧಿಗೆ 500 ಕೋಟಿ ರೂಗಳ ದೇಣಿಗೆ ನೀಡುವುದಾಗಿ ಹೇಳಿಕೆ ನೀಡಿದೆ.

ಭಾರತದಲ್ಲಿ ವ್ಯಾಪಕ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ಮಾಡಿರುವ ಪಿಎಂ ಕೇರ್ಸ್ ಫಂಡ್ ಗೆ ದೇಶಾದ್ಯಂತ ನೂರಾರು ಕೋಟಿ ರೂಗಳ ದೇಣಿಗೆ ಸಂಗ್ರಹವಾಗುತ್ತಿದ್ದು, ಈ ಪಟ್ಟಿಗೆ ಇದೀಗ ಖ್ಯಾತ ಡಿಜಿಟಲ್  ಪೇಮೆಂಟ್ ಸಂಸ್ಥೆ ಪೇಟಿಎಂ ಕೂಡ ಸೇರ್ಪಡೆಯಾಗಿದೆ. PM cares fundಗೆ 500 ಕೋಟಿ ರೂ. ಧನ ಸಹಾಯ ನೀಡುವ ಗುರಿಹೊಂದಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸಂಸ್ಥೆಯ ಹೇಳಿಕೆಯಲ್ಲಿ ಪೇಟಿಎಂ (Paytm) ವ್ಯಾಲೆಟ್, ಯುಪಿಐ (UPI) ಹಾಗೂ Paytm ಡೆಬಿಟ್ ಕಾರ್ಡ್ ಗಳನ್ನು ಉಪಯೋಗಿಸಿ Paytm ಮಾಧ್ಯಮದಿಂದ ಮಾಡಲಾಗಿರುವ ಪ್ರತಿ ಹಣದ ವಹಿವಾಟಿನ ಮೇಲೆ ತಾನು ಪ್ರಧಾನಿ ನಿಧಿಗೆ ರೂ.10 ಹೆಚ್ಚುವರಿ ಕೊಡುಗೆ ನೀಡುವುದಾಗಿ  ಘೋಷಿಸಿದೆ. ಅಷ್ಟೇ ಅಲ್ಲ Paytm ಆಪ್ ಹಾಗೂ ಅದರ ಇನ್ಸ್ಟ್ರುಮೆಂಟ್ಸ್ ಮಾಧ್ಯಮದ ಮೂಲಕ ಮಾಡಲಾಗುವ ಪ್ರತಿ ಹಣ ಪಾವತಿಗೆ 10 ರೂ. ಹೆಚ್ಚುವರಿ ಕೊಡುಗೆ ತನ್ನ ಪರವಾಗಿ ನೀಡಲಿದೆ.

ಇವುಗಳ ಜೊತೆಗೆ ಕಂಪನಿ ಈ ವೈರಸ್ ವಿರುದ್ಧ ಹೋರಾಟ ನಡೆಸಲು ತಯಾರಿಸಲಾಗಿರುವ  ಚಿಕಿತ್ಸೆಯ ಉಪಕರಣಗಳು ಹಾಗೂ ಔಷದಿ ತಯಾರಿಸುವಲ್ಲಿ ನಿರತರಾಗಿರುವ ತಜ್ಞರಿಗಾಗಿ 5 ಕೋಟಿ ರೂ. ಗಳ ನಿಧಿ ಸ್ಥಾಪಿಸಿದೆ. ಈ ಮೂಲಕ ತಾನು ಪ್ರಧಾನಿ ನಿಧಿಗೆ 500 ಕೋಟಿ ರೂ ದೇಣಿಗೆ ಸಂಗ್ರಹ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿಕೊಂಡಿದೆ. ಇದೇ ಕಾರಣಕ್ಕಾಗಿ ದೇಶದ  ನಾಗರಿಕರ ಪ್ರಾಣ ಉಳಿಸಲು Paytm ಬಳಕೆದಾರರು ದೊಡ್ಡ ಪ್ರಮಾಣದಲ್ಲಿ ಹಣ ನೆರವು ನೀಡುವಂತೆ ಮನವಿ ಮಾಡಿಕೊಂಡಿದೆ. 

PM Cares Fund ಗೆ ನೀಡಲಾಗುವ ಕೊಡುಗೆಗಳಿಗೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 10 ಮತ್ತು 139 ರ ಅಡಿ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com