'ಫ್ಯಾಬೆಲ್ಲೆ ಲಾ ಟೆರ್ರೆ': ಐಟಿಸಿ ನೂತನ ಉತ್ಪನ್ನ ಅನಾವರಣ

ದೇಶದಲ್ಲಿ ಸರಿಸಾಟಿ ಇಲ್ಲದ ಚಾಕೊಲೇಟ್ ಅನುಭವಗಳನ್ನು ಸೃಷ್ಟಿಸಿ ಪೂರೈಸುತ್ತಿರುವ ಐಟಿಸಿ ಲಿಮಿಟೆಡ್ ನ ಫ್ಯಾಬೆಲ್‍ ಚಾಕೊಲೇಟ್ಸ್ ಫ್ಯಾಬೆಲ್ಲೆ ಲಾ ಟೆರ್ರೆ (‘Fabelle La Terre’) ಬಿಡುಗಡೆ ಮಾಡಿದೆ. 
ಫ್ಯಾಬೆಲ್ಲೆ ಲಾ ಟೆರ್ರೆ
ಫ್ಯಾಬೆಲ್ಲೆ ಲಾ ಟೆರ್ರೆ

ನವದೆಹಲಿ: ದೇಶದಲ್ಲಿ ಸರಿಸಾಟಿ ಇಲ್ಲದ ಚಾಕೊಲೇಟ್ ಅನುಭವಗಳನ್ನು ಸೃಷ್ಟಿಸಿ ಪೂರೈಸುತ್ತಿರುವ ಐಟಿಸಿ ಲಿಮಿಟೆಡ್ ನ ಫ್ಯಾಬೆಲ್‍ ಚಾಕೊಲೇಟ್ಸ್ ಫ್ಯಾಬೆಲ್ಲೆ ಲಾ ಟೆರ್ರೆ (‘Fabelle La Terre’) ಬಿಡುಗಡೆ ಮಾಡಿದೆ. 

ಇದು ಶೇ.100ರಷ್ಟು ಅರ್ಥ್ ಪಾಸಿಟಿವ್ ಚಾಕೊಲೇಟ್ ಆಗಿದ್ದು, ಒಂದು ಸೃಜನಶೀಲ ಮರುಕಲ್ಪನೆ, ಆಗಿ ಅನಾವರಣಗೊಂಡಿದೆ. ಈ ಮೂಲಕ ಬ್ರ್ಯಾಂಡ್ ದೀಪಾವಳಿಗೂ ಮುಂಚಿತವಾಗಿ, ವಿಶಿಷ್ಟವಾದ ಒನ್-ಆಫ್‍-ಇಟ್ಸ್ -ಕೈಂಡ್ ಎಂಬಂಥ ಚಾಕೊಲೇಟ್ ವೇರಿಯೆಂಟ್ ಅನ್ನು  ಅನಾವರಣಗೊಳಿಸಿದೆ. 

ವಿಶ್ವಾಸ, ಸುರಕ್ಷತೆ ಮತ್ತು ಶುಚಿತ್ವವನ್ನು ಒದಗಿಸುವ ವಿಶ್ವಾಸಾರ್ಹ ಬ್ರಾಂಡ್ ಗಳ ಉತ್ಪನ್ನಗಳನ್ನು ಖರೀದಿಸುವ ಬಳಕೆದಾರರ ಟ್ರೆಂಡ್‍ ಹೆಚ್ಚಾಗುತ್ತಿದ್ದು, ಅದನ್ನು ವರ್ಚುವಲ್ ಇವೆಂಟ್ ಒಂದರಲ್ಲಿ ಬಿಡುಗಡೆಯಾದ ಇದು ಸಕಾರಾತ್ಮಕ ಪರಿಣಾಮವನ್ನು ಅಂತರ್ಗತಗೊಳಿಸಿಕೊಂಡು  ಈಡೇರಿಸುತ್ತಿದೆ.

ಬಿಡುಗಡೆಯ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಐಟಿಸಿಯ ಚಾಕೊಲೇಟ್, ಕಾಫಿ, ಕಾನ್ಫೆಕ್ಷನರಿ ಆ್ಯಂಡ್ ನ್ಯೂ ಕೆಟಗರಿ ಡೆವಲಪ್ ಮೆಂಟ್ ಸಿಒಒ ಅನುಜ್ ರುಸ್ತಗಿ, ಸರಿಸಾಟಿ ಇಲ್ಲದ ಮತ್ತು ಒನ್-ಆಫ್-ಇಟ್ಸ್-ಕೈಂಡ್ ಚಾಕೊಲೇಟ್ ಅನುಭವದ ಮಾದರಿಯನ್ನು ಪೂರೈಸುವುದು ಫ್ಯಾಬೆಲ್ ನ  ಮೂಲ ತತ್ವದ ಕೇಂದ್ರ ಬಿಂದುವಾಗಿದೆ. 

ಪ್ರಸ್ತುತ ಪರಿಸ್ಥಿತಿಯು ನಮ್ಮೆಲ್ಲರ ಪ್ರಜ್ಞೆಯನ್ನು ಬಡಿದೆಬ್ಬಿಸಿದೆ ಮತ್ತು ಪರಿಸರವನ್ನು ರಕ್ಷಿಸಬೇಕಾದ ತುರ್ತು ಅಗತ್ಯ, ನಮ್ಮ ಚಿಂತನೆ ಮತ್ತು ಕ್ರಿಯೆಗಳಲ್ಲಿ ಸುಸ್ಥಿರತೆ ಇರಬೇಕಾ ಬಗ್ಗೆ ಜಾಗೃತಿಯನ್ನು ಮೂಡಿಸಿದೆ. ಭೂಮಿ ತಾಯಿಗೆ ಕೊಡುಗೆ ನೀಡುವಲ್ಲಿ ‘ಫ್ಯಾಬೆಲ್ ಅರ್ಥ್’ ನ ಬಿಡುಗಡೆ ನಮ್ಮ  ಹೆಜ್ಜೆಯಾಗಿದ್ದು, ಇದಕ್ಕೆ ಗ್ರಾಹಕರ ಬೆಂಬಲವನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com