ಜಗತ್ತಿನಲ್ಲಿ ಅತ್ಯಧಿಕ ಮೌಲ್ಯದ ಭಾರತೀಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್: ಟಾಪ್ 500 ಪಟ್ಟಿಯಲ್ಲಿ ದೇಶದ 12 ಸಂಸ್ಥೆಗಳು
ಅತ್ಯಧಿಕ ಶ್ರೇಣಿಯನ್ನು ಹೊಂದಿದ ಭಾರತೀಯ ಸಂಸ್ಥೆಗಳ ಪೈಕಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್ ಸಂಸ್ಥೆ ಪಟ್ಟಿಯಲ್ಲಿ ಜಾಗತಿಕ ಮಟ್ಟದಲ್ಲಿ 57ನೇ ಸ್ಥಾನದಲ್ಲಿದೆ. ಟಿಸಿಎಸ್ ಜಾಗತಿಕ ಪಟ್ಟಿಯಲ್ಲಿ 74ನೇ ಸ್ಥಾನದಲ್ಲಿದೆ.
Published: 20th August 2021 06:39 PM | Last Updated: 20th August 2021 07:29 PM | A+A A-

ರಿಲಯನ್ಸ್ ಮಾಲೀಕ ಮುಕೇಶ್ ಅಂಬಾನಿ
ನವದೆಹಲಿ: ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಮೌಲ್ಯಯುತ ಸರ್ಕಾರೇತರ ಭಾರತೀಯ ಸಂಸ್ಥೆ ಎನ್ನುವ ಖ್ಯಾತಿಗೆ ರಿಲಯನ್ಸ್ ಸಂಸ್ಥೆ ಪಾತ್ರವಾಗಿದೆ. ಜಗತ್ತಿನ ಟಾಪ್ 500 ಸರ್ಕಾರೇತರ ಸಂಸ್ಥೆಗಳ ಪಟ್ಟಿಯಿಂದಾಗಿ ಈ ವಿಷಯ ಬಹಿರಂಗಗೊಂಡಿದೆ. ಅತ್ಯಧಿಕ ಮೌಲ್ಯದ ಭಾರತೀಯ ಸಂಸ್ಥೆ ಎನ್ನುವ ಖ್ಯಾತಿಗೆ ರಿಲಯನ್ಸ್ ಪಾತ್ರವಾಗಿದ್ದರ ಹೊರತಾಗಿಯೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಜಾಗತಿಕ ಮಟ್ಟದಲ್ಲಿ ಈ ಬಾರಿ ಮೂರು ಸ್ಥಾನ ಕುಸಿದಿದೆ.
ಈ ಬಾರಿಯ ಟಾಪ್ 500 ಕಂಪನಿಗಳ ಪಟ್ಟಿಯಲ್ಲಿ ಭಾರತದ 12 ಕಂಪನಿಗಳು ಸ್ಥಾನ ಪಡೆದಿವೆ. ಕಳೆದ ವರ್ಷ 11 ಭಾರತೀಯ ಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಪಟ್ಟಿಯಲ್ಲಿರುವ ಇತರೆ ಭಾರತೀಯ ಸಂಸ್ಥೆಗಳಾದ ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಭಾರ್ತಿ ಏರ್ಟೆಲ್ ಪಟ್ಟಿಯಲ್ಲಿ ಈ ಬಾರಿ ಕೆಳ ಕ್ರಮಾಂಕಕ್ಕೆ ಕುಸಿತಗೊಂಡಿವೆ.
ಅತ್ಯಧಿಕ ಶ್ರೇಣಿಯನ್ನು ಹೊಂದಿದ ಭಾರತೀಯ ಸಂಸ್ಥೆಗಳ ಪೈಕಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್ ಸಂಸ್ಥೆ ಪಟ್ಟಿಯಲ್ಲಿ ಜಾಗತಿಕ ಮಟ್ಟದಲ್ಲಿ 57ನೇ ಸ್ಥಾನದಲ್ಲಿದೆ. ಟಿಸಿಎಸ್ ಜಾಗತಿಕ ಪಟ್ಟಿಯಲ್ಲಿ 74ನೇ ಸ್ಥಾನದಲ್ಲಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಟಾಪ್ 124ನೇ ಸ್ಥಾನ, ಕೋಟಕ್ ಬ್ಯಾಂಕ್, 380ನೇ ಸ್ಥಾನ, ಐಸಿಐಸಿಐ ಬ್ಯಾಂಕ್ 268ನೇ ಸ್ಥಾನದಲ್ಲಿದೆ. ವಿಪ್ರೊ 457, ಏಷ್ಯನ್ ಪೇಂಟ್ಸ್ 477ನೇ ಸ್ಥಾನ ಮತ್ತು ಎಚ್ ಸಿ ಎಲ್ ಸಂಸ್ಥೆ 498ನೇ ಸ್ಥಾನ ಗಳಿಸಿವೆ.
ಈ ಜಾಗತಿಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಆಪಲ್ ಸಂಸ್ಥೆ ಗಳಿಸಿಕೊಂಡಿದೆ.