'ಗೂಗಲ್ ಪೇ, ಫೋನ್ ಪೇಗಳು ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿವೆ, ಈಗಲಾದರೂ ಎಚ್ಚೆತ್ತುಕೊಳ್ಳಿ': ಉದಯ್ ಕೋಟಕ್

ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ ಬ್ಯಾಂಕ್ ನ ಸಿಇಒ ಉದಯ್ ಕೊಟಕ್ ಹೇಳಿದ್ದಾರೆ.
ಉದಯ್ ಕೋಟಕ್
ಉದಯ್ ಕೋಟಕ್

ನವದೆಹಲಿ: ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ ಬ್ಯಾಂಕ್ ನ ಸಿಇಒ ಉದಯ್ ಕೊಟಕ್ ಹೇಳಿದ್ದಾರೆ.

ಶುಕ್ರವಾರ ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ಸ್ ಅಥಾರಿಟಿ ಮತ್ತು ಬ್ಲೂಮ್‌ಬರ್ಗ್ ಆಯೋಜಿಸಿದ ಇನ್ಫಿನಿಟಿ ಫೋರಮ್‌ನಲ್ಲಿ ಮಾತನಾಡಿದ ಅವರು, 'ಭಾರತೀಯ ಬ್ಯಾಂಕ್‌ಗಳು ಆನ್‌ಲೈನ್ ಪಾವತಿ ವ್ಯವಹಾರವನ್ನು ನಿರ್ಲಕ್ಷಿಸುವುದನ್ನು ಹೀಗೆಯೇ ಮುಂದುವರಿಸಿದರೆ, ತಮ್ಮ ಸಾಂಪ್ರದಾಯಿಕ ವ್ಯವಹಾರದ ಬಹುಪಾಲನ್ನು ಡಿಜಿಟಲ್ ವಾಲೆಟ್ ಪ್ಲಾಟ್‌ಫಾರ್ಮ್‌ಗಳಾದ ಗೂಗಲ್ ಪೇ ಮತ್ತು ಫೋನ್‌ಪೇ ಮೂಲಕ ಕಳೆದುಕೊಳ್ಳಬಹುದು. ಭಾರತೀಯ ಬ್ಯಾಂಕರ್‌ಗಳು ಪಾವತಿ ವ್ಯವಹಾರದ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ. ಇದು ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪಾವತಿಗಳನ್ನು ಎರಡು ಪ್ರಮುಖ ಡಿಜಿಟಲ್ ವ್ಯಾಲೆಟ್‌ಗಳಿಂದ ಏಕಸ್ವಾಮ್ಯಕ್ಕೆ ಕಾರಣವಾಗುತ್ತದೆ. ಇದು ಶೇ.85ರಷ್ಟು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಅಂತೆಯೇ ಬ್ಯಾಂಕ್ ಗಳು ಕನಿಷ್ಠ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಸಾಂಪ್ರದಾಯಿಕ ಹಣಕಾಸು ಮಾರುಕಟ್ಟೆಗಳ ದೊಡ್ಡ ಭಾಗ ಅದರಿಂದ ಹೊರಬರುವುದನ್ನು ನೀವು ನೋಡುತ್ತೀರಿ. ಈ ಪೈಪೋಟಿಯನ್ನು ಹತ್ತಿಕ್ಕಲು ಬ್ಯಾಂಕರ್‌ಗಳು ಮಾರಾಟ ಕೇಂದ್ರಿತ ವಿಧಾನದ ಬದಲು ಗ್ರಾಹಕ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ, ಸಾಲದಾತರು ಹೆಚ್ಚಿನ ಪ್ರತಿಭೆಗಳನ್ನು ನೇಮಿಸಿಕೊಳ್ಳಬೇಕು. ತಮ್ಮ ತಂತ್ರಜ್ಞಾನಗಳನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬೇಕು. ಅದೇ ಸಮಯದಲ್ಲಿ, ಈ ಫಿನ್‌ಟೆಕ್ ಕಂಪನಿಗಳ ಡೇಟಾ ಬಳಕೆಯ ಬಗ್ಗೆ ನಿಯಂತ್ರಕರು ಎಚ್ಚರದಿಂದಿರಬೇಕು ಎಂದು ಕೋಟಕ್ ಹೇಳಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com