ಎರಡನೇ ಬಾರಿ ಪೇಟಿಎಂ ಷೇರುಗಳು ತೀವ್ರ ಕುಸಿತ, ಹೂಡಿಕೆದಾರರಿಗೆ 55 ಸಾವಿರ ಕೋಟಿ ರೂಪಾಯಿ ನಷ್ಟ!

ಸೋಮವಾರದಂದು (ನ.22) ರಂದು ಪೇಟಿಎಂ ಷೇರುಗಳು ಎರಡನೇ ಬಾರಿಗೆ ತೀವ್ರ ಕುಸಿತ ಕಂಡಿದ್ದು, ಎರಡು ಸೆಷನ್ ಗಳಲ್ಲಿ ಹೂಡಿಕೆದಾರರಿಗೆ ಒಟ್ಟು 55,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. 
ಪೇಟಿಎಂ ಆಪ್
ಪೇಟಿಎಂ ಆಪ್
Updated on

ಮುಂಬೈ: ಸೋಮವಾರದಂದು (ನ.22) ರಂದು ಪೇಟಿಎಂ ಷೇರುಗಳು ಎರಡನೇ ಬಾರಿಗೆ ತೀವ್ರ ಕುಸಿತ ಕಂಡಿದ್ದು, ಎರಡು ಸೆಷನ್ ಗಳಲ್ಲಿ ಹೂಡಿಕೆದಾರರಿಗೆ ಒಟ್ಟು 55,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. 

ಷೇರು ಮಾರುಕಟ್ಟೆಯಲ್ಲಿ ಒನ್ 97 ಕಮ್ಯುನಿಕೇಷನ್ಸ್ ಎಂದು ಪಟ್ಟಿಯಾಗಿರುವ ಪೇಟಿಎಂ ನ ಷೇರುಗಳು ಮಧ್ಯಾಹ್ನ 12.01 ರ ವೇಳೆಗೆ ಶೇ.17 ರಷ್ಟು ಕುಸಿದಿದ್ದು, ಬಿಎಸ್ಇ ಯಲ್ಲಿ ಈ ಹಿಂದಿನ ಮುಕ್ತಾಯದ ಅವಧಿಯಲ್ಲಿ ರೂಪಾಯಿ 1,564.15 ಕ್ಕೆ ಷೇರುಗಳ ಮೌಲ್ಯ 1,289 ಕ್ಕೆ ಕುಸಿದಿತ್ತು. 

ಸಂಸ್ಥೆಯ ಮಾರುಕಟ್ಟೆ ಕ್ಯಾಪ್ ಈಗ 85,000 ಕೋಟಿ ರೂಪಾಯಿಗಿಂತ ಕೆಳಗೆ ಕುಸಿದಿದೆ. ಷೇರುಗಳು ವಿನಿಮಯ ಕೇಂದ್ರಕ್ಕೆ ಬರುವುದಕ್ಕಿಂತಲೂ ಮುಂಚೆ ಎಂ-ಕ್ಯಾಪ್ 1.39 ಲಕ್ಷ ಕೋಟಿಯಷ್ಟಿತ್ತು. 

ಈ ಕುಸಿತದ ಮೂಲಕ ಪೇಟಿಎಂ ನ ಷೇರುಗಳು, ಐಪಿಒ ವಿತರಣೆ ಬೆಲೆಯಾದ 2,150 ರೂಪಾಯಿಗಳಿಗೆ ಹೋಲಿಕೆ ಮಾಡಿದಲ್ಲಿ ಶೇ.40 ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ವಾರಾಂತ್ಯದಲ್ಲಿ ಪೇಟಿಎಂ ನ ಒಟ್ಟು ವ್ಯಾಪಾರದ ಮೌಲ್ಯ (ಅಥವಾ ಈ ವೇದಿಕೆಯ ಮೂಲಕ ನಡೆದ ವಹಿವಾಟು) ಶೇ.131 ರಷ್ಟು-11.2 ಬಿಲಿಯನ್ ಡಾಲರ್ ಗೆ ಏರಿಕೆಯಾಗಿರುವುದರ ಹೊರತಾಗಿಯೂ ಷೇರು ಮಾರುಕಟ್ಟೆಯಲ್ಲಿ ಈ ಕುಸಿತ ದಾಖಲಾಗಿದೆ. 

ಪೇಟಿಎಂ ನ ಮಾಸಿಕ ವಹಿವಾಟು ಬಳಕೆದಾರರು (ಎಂಟಿಯು) ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಶೇ.25 ರಷ್ಟು ಬೆಳವಣಿಗೆಯಾಗಿದೆ ಎಂದು ಪೇಟಿಎಂ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com