ಫ್ಯೂಚರ್ ಗ್ರೂಪ್ ಜೊತೆ ಒಪ್ಪಂದ ವಿವಾದ: ಅಮೆಜಾನ್‍ಗೆ ಸಿಸಿಐ 202 ಕೋಟಿ ರೂ. ದಂಡ

ಆನ್‍ಲೈನ್ ಶಾಪಿಂಗ್‍ ಖ್ಯಾತ ಅಮೆಜಾನ್ ಸಂಸ್ಥೆಗೆ ಸ್ಪರ್ಧಾತ್ಮಕ ಆಯೋಗ 202 ಕೋಟಿ ರೂ ದಂಡ ಹಾಕಿ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆನ್‍ಲೈನ್ ಶಾಪಿಂಗ್‍ ಖ್ಯಾತ ಅಮೆಜಾನ್ ಸಂಸ್ಥೆಗೆ ಸ್ಪರ್ಧಾತ್ಮಕ ಆಯೋಗ 202 ಕೋಟಿ ರೂ ದಂಡ ಹಾಕಿ ಆದೇಶ ಹೊರಡಿಸಿದೆ.

ಅಮೇಜಾನ್ ಗೆ ಮುಳುವಾಯ್ತು ಫ್ಯೂಚರ್ ಗ್ರೂಪ್ ಜೊತೆಗಿನ ಒಪ್ಪಂದ
ಇನ್ನು ಸ್ಪರ್ಧಾತ್ಮಕ ಆಯೋಗದ ಈ ಭಾರಿ ದಂಡಕ್ಕೆ ಅಮೇಜಾನ್ ಮತ್ತು ಫ್ಯೂಚರ್ ಗ್ರೂಪ್ ಜೊತೆಗಿನ ಒಪ್ಪಂದವೇ ಕಾರಣ ಎಂದು ಹೇಳಲಾಗಿದೆ. ಭಾರತದ ಫ್ಯೂಚರ್ ಗ್ರೂಪ್ ಜೊತೆಗಿನ 2019ರ ಒಪ್ಪಂದವನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ರದ್ದುಗೊಳಿಸಿ, ಅಮೆಜಾನ್‍ಗೆ 202 ಕೋಟಿ ರೂ. ದಂಡ ವಿಧಿಸಿದೆ.

ಏನಿದು ಪ್ರಕರಣ?
ಭಾರತದ ಫ್ಯೂಚರ್ ಗ್ರೂಪ್ ಜೊತೆ ಅಮೆರಿಕಾದ ಅಮೆಜಾನ್ 2019ರಲ್ಲಿ ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು. ಈ ನಡುವೆ ಫ್ಯೂಚರ್ ಗ್ರೂಪ್ 2019ರಲ್ಲಿ 24,713 ಕೋಟಿ ರೂಪಾಯಿಯ ತನ್ನ ರಿಟೇಲ್‍ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಗೆ ಮಾರಾಟ ಮಾಡಲು ಯತ್ನಿಸಿತು. ಆಗ ಅಮೆಜಾನ್ ಇದ್ದಕ್ಕೆ ತಕರಾರು ಎತ್ತಿತ್ತು. ಮಾರಾಟಕ್ಕೆ ಅಪಸ್ವರ ಎತ್ತಿದ್ದಕ್ಕೆ ಫ್ಯೂಚರ್ ಗ್ರೂಪ್ ಸಿಸಿಐಗೆ ದೂರು ದಾಖಲಿಸಿತ್ತು. 

ಇದೀಗ ದೂರನ್ನು ಪಲೀಶಿಸಿ ಸಿಸಿಐ 57 ಪುಟಗಳ ಆದೇಶವನ್ನು ಈ ಹೊರಡಿಸಿದೆ. ಜೊತೆಗೆ ಈ ಹಿಂದೆ 2019ರಲ್ಲಿ ಮಾಡಿದ ಡೀಲ್‍ಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ. ಹಾಗಾಗಿ ಅಲ್ಲಿಯವರೆಗೆ 2019ರಲ್ಲಿ ನೀಡಲಾಗಿರುವ ಅನುಮೋದನೆ ಸ್ಥಗಿತವಾಗಿರುತ್ತದೆ ಎಂದು ಆದೇಶಿಸಿದೆ. ಇದರಿಂದ ಅಮೆಜಾನ್‍ಗೆ ಹಿನ್ನಡೆ ಉಂಟಾಗಿದೆ. 

ಅಮೆಜಾನ್ ವಾದ ಏನು?
2019ರ ಹೂಡಿಕೆ ಒಪ್ಪಂದ ಪ್ರಕಾರ, ಫ್ಯೂಚರ್ ಗ್ರೂಪ್‍ನಲ್ಲಿ ನಾವು 1,460 ಕೋಟಿ ಹೂಡಿಕೆ ಮಾಡಿದ್ದೇವೆ. ಒಪ್ಪಂದ ಪ್ರಕಾರ, ಫ್ಯೂಚರ್ ಸಮೂಹವು ತನ್ನ ಆಸ್ತಿಯನ್ನು ನಿಬರ್ಂಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಹೇಳಿರುವ ಯಾರೊಬ್ಬರಿಗೂ ಮಾರಾಟ ಮಾಡುವಂತಿಲ್ಲ. ಆ ಪಟ್ಟಿಯಲ್ಲಿ ರಿಲಯನ್ಸ್ ಸಹ ಸೇರಿಕೊಂಡಿದೆ. ಈ ಒಪ್ಪಂದ ನಡೆದಿದ್ದರೂ 2020ರ ಆಗಸ್ಟ್‍ನಲ್ಲಿ ಫ್ಯೂಚರ್ ರಿಟೇಲ್‍ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಇದು 2019ರಲ್ಲಿ ಫ್ಯೂಚರ್ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆಯಾಗಿದೆ ಎನ್ನುವುದು ಅಮೆಜಾನ್‍ನ ವಾದವಾಗಿದೆ.

ಫ್ಯೂಚರ್ ಗ್ರೂಪ್ ಮತ್ತು ಅಮೆಜಾನ್ ನಡುವಿನ ಕಾನೂನು ಹೋರಾಟದಲ್ಲಿ ಫ್ಯೂಚರ್ ಗ್ರೂಪ್‍ಗೆ ಮುನ್ನಡೆ ಸಿಕ್ಕಿದ್ದು, ಅಮೆಜಾನ್‍ಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾಕಿರುವ ದಂಡದ ಬಗ್ಗೆ ಪ್ರಶ್ನೆ ಮಾಡುವ ಸಾಧ್ಯತೆ ಇದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com