ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನ: ಇದುವರೆಗೂ 4.51 ಕೋಟಿಗೂ ಅಧಿಕ ಅರ್ಜಿ ನೋಂದಣಿ

2019-20 ಆರ್ಥಿಕ ವರ್ಷದಲ್ಲಿ 5.95 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದೇ ಡಿಸೆಂಬರ್ 31 ಕೊನೆಯ ದಿನವಾಗಿದೆ. ಇದೇ ಡಿಸೆಂಬರ್ 26ರವರೆಗಿನ ಮಾಹಿತಿಯ ಪ್ರಕಾರ 2020-21ನೇ ಸಾಲಿಗಾಗಿ 4.51 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ನೋಂದಣಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಇದರಲ್ಲಿ ಸುಮಾರು 2.44 ಕೋಟಿ ಐಟಿಆರ್-1 ಮತ್ತು 1.12 ಕೋಟಿ ಐಟಿಆರ್-೪ ಕೂಡಾ ಸೇರಿದೆ.

ಐಟಿಆರ್ ಫಾರ್ಮ್ 1 ಹಾಗೂ ಐಟಿಆರ್ ಫಾರ್ಮ್ 4 ಸರಳ ಫಾರ್ಮ್ ಗಳಾಗಿದ್ದು, ಸಣ್ಣ ಮತ್ತು ಮಧ್ಯಮ ವರ್ಗದ ದೊಡ್ಡ ಪ್ರಮಾಣದ ತೆರಿಗೆದಾರರಿದ್ದಾರೆ. ಐಟಿಆರ್ ಫಾರ್ಮ್ 1ನ್ನು 50 ಲಕ್ಷದವರೆಗೂ ಆದಾಯವಿರುವವರು ನೋಂದಣಿ ಮಾಡಬಹುದಾಗಿದೆ. ವೇತನದಾರರು, ಆಸ್ತಿದಾರರು ಮತ್ತಿತರ ಆದಾಯ ಮೂಲಗಳ ತೆರಿಗೆದಾರರು ಇದನ್ನು ನೋಂದಣಿ ಮಾಡುತ್ತಾರೆ.

50 ಲಕ್ಷ ರೂಪಾಯಿ ಆದಾಯವಿರುವ ಸಂಸ್ಥೆಗಳು, ವ್ಯವಹಾರ ಮತ್ತು ವೃತ್ತಿಯಿಂದ ಆದಾಯ ಪಡೆಯುವವರು ಐಟಿಆರ್- 4 ಫಾರ್ಮ್ ನ್ನು ನೋಂದಣಿ ಮಾಡಬಹುದಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ರವರೆಗೂ ಗಡುವು ವಿಸ್ತರಿಸಲಾಗಿದೆ. 2019-20 ಆರ್ಥಿಕ ವರ್ಷದಲ್ಲಿ 5.95 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com