ತೆರಿಗೆ ವಿವಾದ: ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಬಿತ್ತು ಬೀಗ..!; ಗೌರವ್ ಗುಪ್ತಾ ಹೇಳಿದ್ದೇನು?

ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ  ಮತ್ತೆ ಬೀಗ ಬಿದ್ದಿದೆ.
ಮಂತ್ರಿ ಮಾಲ್ ಗೆ ಬೀಗ
ಮಂತ್ರಿ ಮಾಲ್ ಗೆ ಬೀಗ

ಬೆಂಗಳೂರು: ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ  ಮತ್ತೆ ಬೀಗ ಬಿದ್ದಿದೆ.

ಹೌದು.. ತೆರಿಗೆ ಕಟ್ಟದ ಆರೋಪ ಎದುರಿಸುತ್ತಿರುವ ನಗರದ ಪ್ರತಿಷ್ಠಿತ ಮಂತ್ರಿಮಾಲ್​ಗೆ ಮತ್ತೆ ಬಿಬಿಎಂಪಿ ಬೀಗ ಜಡಿದಿದೆ. 27 ಕೋಟಿ ರೂಪಾಯಿ ತೆರಿಗೆಯನ್ನ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ಅಧಿಕಾರಿಗಳಿಂದ ಮಂತ್ರಿಮಾಲ್​ಗೆ ಬೀಗ ಹಾಕಿದ್ದಾರೆ.

ಮೂರು ವರ್ಷಗಳ ಅವಧಿಯಲ್ಲಿ ಮಂತ್ರಿಮಾಲ್​ 36 ಕೋಟಿ ರೂಪಾಯಿ ಆಸ್ತಿ ತೆರಿಗೆಯನ್ನ ಕಟ್ಟಬೇಕಿತ್ತು. ಹೀಗಾಗಿ ಕಳೆದ ಅಕ್ಟೋಬರ್​ನಲ್ಲಿ ಬೀಗ ಕೂಡ ಜಡಿಯಲಾಗಿತ್ತು. ಈ ಸಂದರ್ಭದಲ್ಲಿ 5 ಕೋಟಿ ಹಣವನ್ನ ಮಂತ್ರಿಮಾಲ್ ನೀಡಿತ್ತು. 

ಅಕ್ಟೋಬರ್ 31ರ ಬಳಿಕ ಹಲವು ಬಾರಿ ನೋಟಿಸ್ ನೀಡಿದ್ದರೂ ಉಳಿದ ಹಣವನ್ನ ಮಂತ್ರಿಮಾಲ್ ನೀಡಿರಲಿಲ್ಲ ಎನ್ನಲಾಗಿದೆ. ಅಕ್ಟೋಬರ್ ಮುಗಿದರೂ ತೆರಿಗೆ ಕಟ್ಟದಿದ್ದರಿಂದ ನವೆಂಬರ್ 15ರಂದು ಮತ್ತೆ ಬೀಗ ಹಾಕಲು ಮುಂದಾಗಿತ್ತು. ನವೆಂಬರ್ 15ರಂದು ಮಂತ್ರಿಮಾಲ್​ಗೆ 15 ದಿನಗಳ ಕಾಲಾವಕಾಶವನ್ನ ಪಾಲಿಕೆ ಕೊಟ್ಟಿತ್ತು. ಆದರೂ ತೆರಿಗೆ ಕಟ್ಟದ ಹಿನ್ನಲೆಯಲ್ಲಿ ಇಂದು ಮಾಲ್ ಗೆ ಬೀಗ ಜಡಿಯಲಾಗಿದೆ.

2 ಬಾರಿ ನೋಟಿಸ್ ನೀಡಿದ್ದೇವೆ., ಇನ್ನಾವುದೇ ನೋಟಿಸ್ ನೀಡುವ ಅವಶ್ಯಕತೆ ಇಲ್ಲ: ಗೌರವ್ ಗುಪ್ತಾ
ಇದೇ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು, 'ಈಗಾಗಲೇ ನಾವು 2 ಬಾರಿ ನೋಟಿಸ್ ನೀಡಿದ್ದೇವೆ. ಇನ್ನು ಯಾವುದೇ ಅವಕಾಶ ಕೊಡುವ ಅವಶ್ಯಕತೆ ಇಲ್ಲ. ಮಾಲ್ ಗೆ ಉಳಿದ ತೆರಿಗೆ ಕಟ್ಟದಿದ್ದರೆ ಬಹಳ ಕಠಿಣ ಕ್ರಮವನ್ನು ನಾವು ಜರುಗಿಸಲು ಸಿದ್ಧರಿದ್ದೇವೆ. ಈ ವಿಷಯದಲ್ಲಿ ಯಾವುದೇ ದಯೆ, ಕರುಣೆ ಇಲ್ಲ, ಅದರ ವಿಚಾರವಾಗಿ ಇಂದು ಬೆಳಿಗ್ಗೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com