ಮಂತ್ರಿ ಮಾಲ್‌ನಿಂದ 5 ಕೋಟಿ ರೂ. ಬಾಕಿ ಆಸ್ತಿ ತೆರಿಗೆ ವಸೂಲಿ: ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಪಶ್ಚಿಮ ವಲಯದ ಅಭಿಷೇಕ್ ಡೆವಲಪರ್ಸ್‌ ನಿಂದ ಬಿಬಿಎಂಪಿ, ಐದು ಕೋಟಿ ರೂ. ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಿದೆ.
ಮಂತ್ರಿ ಮಾಲ್
ಮಂತ್ರಿ ಮಾಲ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಪಶ್ಚಿಮ ವಲಯದ ಅಭಿಷೇಕ್ ಡೆವಲಪರ್ಸ್‌ ನಿಂದ ಬಿಬಿಎಂಪಿ, ಐದು ಕೋಟಿ ರೂ. ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಿದೆ.

ಮಂತ್ರಿಮಾಲ್ ಮಾಲೀಕರು 2018-19ನೇ ಸಾಲಿನಿಂದ ಇದುವರೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಈ ನಡುವೆ, ತೆರಿಗೆ ಪಾವತಿಗಾಗಿ 10,43,81,045 /- ರೂ. ಗಳ ಚೆಕ್‌ ನೀಡಿದ್ದು, ಬ್ಯಾಂಕ್‌ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಅದು ಬೌನ್ಸ್‌ ಆಗಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. 

ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ ಮಂತ್ರಿಮಾಲ್ ಗೆ ಅನೇಕ ಬಾಕಿ ನೋಟಿಸ್ ಜಾರಿ ಮಾಡಿದ್ದು, ಅವರು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಗುರುವಾರ ಜಂಟಿ ಆಯುಕ್ತ(ಪಶ್ಚಿಮ) ಶಿವಸ್ವಾಮಿ ಹಾಗೂ ಕಂದಾಯ ಸಿಬ್ಬಂದಿ ತಂಡದೊಂದಿಗೆ ಮಂತ್ರಿಮಾಲ್‌ ಅನ್ನು ಜಪ್ತಿ ಮಾಡಲು ಮುಂದಾದರು. ಆಗ ಮಂತ್ರಿಮಾಲ್ ಆಡಳಿತ ಸಿಬ್ಬಂದಿ 5 ಕೋಟಿ ರೂ.ಗಳ ಡಿಡಿ ನೀಡಿದ್ದು, ಉಳಿದ ಆಸ್ತಿತೆರಿಗೆ ಬಾಕಿಯನ್ನು ಅ.31ರೊಳಗೆ ಪಾವತಿಸುವುದಾಗಿ ಲಿಖಿತ ರೂಪದಲ್ಲಿ ಮನವಿ ಮಾಡಿದ್ದಾರೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

೨೦೧೭ರ ಬಳಿಕ ಮಂತ್ರಿಮಾಲ್ ಇಲ್ಲಿಯವರೆಗೆ ಆಸ್ತಿ ತೆರಿಗೆಯನ್ನು ಪಾವತಿಸಿರಲಿಲ್ಲ. ಇದರಿಂದಾಗಿ ಬಡ್ಡಿ ಸಹಿತ 27 ಕೋಟಿಯಷ್ಟು ಆಸ್ತಿ ತೆರಿಗೆ ಬಾಕಿ ಉಳಿದಿತ್ತು. ಹೀಗಾಗಿ ಬಾಕಿ ಆಸ್ತಿ ತೆರಿಗೆ ಪಾವತಿಸುವಂತೆ ಇಂದು ಬಿಬಿಎಂಪಿ ಅಧಿಕಾರಿಗಳು ಮಂತ್ರಿಮಾಲ್ ಗೆ ಬೀಗ ಹಾಕಿದ ಬಳಿಕ ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ೫ ಕೋಟಿ ರೂ. ಆಸ್ತಿ ತೆರಿಗೆ ಪಾವತಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com