2022 ಹಣಕಾಸು ವರ್ಷದ ಮೊದಲಾರ್ಧದಲ್ಲಿ 36,342 ಕೋಟಿ ರೂ. ಮೊತ್ತದ 4,071 ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿ ಐ

2020-21ರ ಹಣಕಾಸು ವರ್ಷದಲ್ಲಿ ಒಟ್ಟು 7,363 ಪ್ರಕರಣಗಳು ದಾಖಲಾಗಿದ್ದವು. ವಂಚಿಸಲ್ಪಟ್ಟ ಒಟ್ಟು ಮೊತ್ತ 1,38,422 ಕೋಟಿ ರೂ. ಗಳಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: 2021- 22 ಹಣಕಾಸು ವರ್ಷದ ಮೊದಲಾರ್ಧದಲ್ಲಿಯೇ ಭಾರೀ ಪ್ರಮಾಣದ ಬ್ಯಾಂಕ್ ವಂಚನೆ ಪ್ರಕರಣಗಳು ದಾಖಲಾಗಿರುವುದಾಗಿ ಆರ್ ಬಿ ಐ ವರದಿ ಬಹಿರಂಗಪಡಿಸಿದೆ. 

ಮೇಲ್ಕಂಡ ಅವಧಿಯಲ್ಲಿ ಒಟ್ಟು 4,071 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 3499 ಪ್ರಕರಣಗಳು ದಾಖಲಾಗಿದ್ದವು.

ಈವರೆಗೆ ದಾಖಲಾಗಿರುವ ಬ್ಯಾಂಕ್ ವಂಚನೆ ಪ್ರಕರಣಗಳ ಒಟ್ಟು ಮೌಲ್ಯ 36,342 ಕೋಟಿ ರೂ.ಎಂದು ತಿಳಿದುಬಂದಿದೆ. 

2020-21ರ ಹಣಕಾಸು ವರ್ಷದಲ್ಲಿ ಒಟ್ಟು 7,363 ಪ್ರಕರಣಗಳು ದಾಖಲಾಗಿದ್ದವು. ವಂಚಿಸಲ್ಪಟ್ಟ ಒಟ್ಟು ಮೊತ್ತ 1,38,422 ಕೋಟಿ ರೂ.ಗಳಾಗಿತ್ತು. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಕರಗಳ ಸಂಖ್ಯೆ ಕುಸಿತ ಕಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com