ಬ್ಯಾಂಕ್ ಗ್ರಾಹಕರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ದ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬ್ಯಾಂಕ್ ಗ್ರಾಹಕರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ದ ಎಂದು ಕೇಂದ್ರ ಕೃಷಿ  ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕೇಂದ್ರ ಕೃಷಿ  ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ

ಬಾಗಲಕೋಟೆ: ಬ್ಯಾಂಕ್ ಗ್ರಾಹಕರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ದ ಎಂದು ಕೇಂದ್ರ ಕೃಷಿ  ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

೭೫ನೇ ಅಜಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಮೋದಿ ಅವರೊಂದಿಗೆ ಮುಧೋಳ ಕೋ-ಆಪರೇಟಿವ್ ಬ್ಯಾಂಕ್ ನ  ಫಲಾನುಭವಿಗಳೊಂದಿಗೆ ನಡೆಸುವ ವರ್ಚುವಲ್ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  'ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಲ್ಲಿ  ಹಣ ಹೂಡಿಕೆ ಮಾಡಿ ಅನ್ಯಾಯಕ್ಕೆ ಒಳಗಾಗುವ  ಗ್ರಾಹಕರು, ಠೇವಣಿದಾರಿಗೆ   ನೆರವು  ಕಲ್ಪಿಸಲು  ಸಾಧ್ಯವಾಗುವಂತೆ  ಪ್ರಧಾನಿ  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಠೇವಣಿ ವಿಮಾ ಪಾವತಿ ನಿಗಮ ಕಾಯ್ದೆ ಮೂಲಕ ಒಂದು ಲಕ್ಷದಿಂದ ೫ ಲಕ್ಷದವರಿಗೆ ವಿಮಾ ಹಣ ವಾಪಸ್ಸು ಕಲ್ಪಿಸುತ್ತಿದೆ ಎಂದು ಹೇಳಿದ್ದಾರೆ.

ಅಂತೆಯೇ 'ದೇಶದಲ್ಲಿ ೧೩೦೦ಕೋಟಿ ರೂಪಾಯಿ ಅನ್ಯಾಯಕ್ಕೆ ಒಳಗಾದ ಗ್ರಾಹಕ, ಠೇವಣಿದಾರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಗ್ರಾಹಕರು, ಠೇವಣಿದಾರರು ಯಾವುದೇ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬಾರದು. ಸಹಕಾರಿ ಬ್ಯಾಂಕುಗಳು ಜನರ ವಿಶ್ವಾಸ, ನಂಬಿಕೆ ಕಳೆದುಕೊಂಡರೆ ಠೇವಣಿಯೂ ಕಡಿಮೆಯಾಗುತ್ತದೆ' ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ  ಆಯುಷ್ಮಾನ್ ಭಾರತ್, ಉಜ್ವಲ ಹೀಗೆ ಅನೇಕ ಜನಪರ ಯೋಜನೆಗಳಿಂದ ಜನರ ಅಭಿವೃದ್ಧಿ ಮಾಡಿದೆ. ಕೊರೊನಾ ಸಂಕಷ್ಟದಲ್ಲಿ ಮೋದಿಯವರ ಕಾರ್ಯಕ್ಷಮತೆಯನ್ನು ಪ್ರಪಂಚವೇ ಕೊಂಡಾಡಿದೆ. ಕಾರಣ ಕೊರೊನಾದಿಂದ ಜನರ ಜೀವರಕ್ಷಣೆಗೆ ದೇಶದಲ್ಲಿಯೇ ಲಸಿಕೆ ಕಂಡುಹಿಡಿಯಲು ಪ್ರೋತ್ಸಾಹಿಸಿದರು. ಮೊದಲು ಸಾಂಕ್ರಾಮಿಕ ಕಾಯಿಲೆಗೆ ಲಸಿಕೆ ಗಳನ್ನು ಹೊರದೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಈಗ ಪ್ರಪಂಚಕ್ಕೆ ಲಸಿಕೆ ನೀಡುವಂತ ಸಾಮರ್ಥ್ಯ ಭಾರತ ಹೊಂದಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೇತೃತ್ವವೇ ಕಾರಣ ಎಂದರು.

ವಾಕ್ಸಿನ್ ಬಂದಾಗ ಕೆಲವರೂ ಇಲ್ಲ ಸಲ್ಲದ  ಅಪಪ್ರಚಾರ ಮಾಡಿದರು. ಮೊದ ಮೊದಲು ವಾಕ್ಸಿನ್ ಆಯಾ ಜಿಲ್ಲಾವಾರು ಬಂದಾಗಲು ಲಸಿಕೆ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕಿದರು. ಲಸಿಕೆಯ ಮಹತ್ವ ಈಗ ಎಲ್ಲರಿಗೂ ಆಗಿದೆ. ಇದರಿಂದ ದೇಶದಲ್ಲಿ ನೂರು ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com